ಕರ್ನಾಟಕ

karnataka

ETV Bharat / state

ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆ

100ಕ್ಕೂ ಹೆಚ್ಚು ಬಸ್​​ಗಳನ್ನು ಬಿಟ್ಟರೂ ವಿಜಯಪುರ ಕೇಂದ್ರ ಬಸ್​​ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು.

Bus station
ಬಸ್​​ ನಿಲ್ದಾಣ

By

Published : May 25, 2020, 6:27 PM IST

ವಿಜಯಪುರ:ಲಾಕ್​​ಡೌನ್​ ಕೊಂಚ ಸಡಿಲಿಸಿದರೂ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗಿನಿಂದಲೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ವಿಜಯಪುರ ವಿಭಾಗದಿಂದ ಇಂದು 100ಕ್ಕೂ ಅಧಿಕ ಬಸ್ ಓಡಾಟ ನಡೆಸಿದರೂ, ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೇವಲ ಬೆರಳೆಣಿಕೆಯಷ್ಟು ಮಾತ್ರ ಪ್ರಯಾಣಿಸಿದರು. ಹೀಗಾದರೆ, ದಿನದ ಖರ್ಚು ವೆಚ್ಚಗಳನ್ನು ಭರಿಸುವುದು ಹೇಗೆ ಎಂಬ ಚಿಂತೆ ಸಾರಿಗೆ ಅಧಿಕಾರಿಗಳಿಗೆ ಕಾಡುತ್ತಿದೆ.

ಬಸ್ ನಿಲ್ದಾಣ

ಭಾನುವಾರದ ಲಾಕ್‌ಡೌನ್‌ ಮುಗಿಸಿ ದೂರದ ಊರುಗಳಿಗೆ ರಂಜಾನ್ ಹಬ್ಬಕ್ಕೆ ತೆರಳುವ ಪ್ರಯಾಣಿಕರ ನಿರೀಕ್ಷೆಯಲ್ಲಿ ಬಸ್​​ಗಳನ್ನು ರಸ್ತೆಗೆ ಇಳಿಸಲಾಯಿತು. ಆದರೆ, ನಿರೀಕ್ಷೆ ಹುಸಿಯಾಯಿತು. ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಅಂಗಡಿ - ಮುಂಗಟ್ಟುಗಳ ಮಾಲೀಕರು ಗ್ರಾಹಕರಿಲ್ಲದೇ ಕಂಗಾಲಾಗಿದ್ದಾರೆ.

ABOUT THE AUTHOR

...view details