ಕರ್ನಾಟಕ

karnataka

ETV Bharat / state

ಮಕ್ಕಳ ಕಲಿಕೆಗೆ ‘ಜಾಂಗಟೆ’ YouTube ಚಾನೆಲ್ ರೂಪಿಸಿದ ಶಿಕ್ಷಕರು

ಮುದ್ದೇಬಿಹಾಳ ತಾಲೂಕಿನ ಗುಡದಿನ್ನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ಚಲವಾದಿ ಹಾಗೂ ಬಸರಕೋಡದ ಎಂಎಸ್​ಬಿಎನ್ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ಗೋಂಧಳೆ ಅವರು ಸೇರಿಕೊಂಡು ಜಾಂಗಟೆ ಶೀರ್ಷಿಕೆಯಡಿ ಯೂಟ್ಯೂಬ್‌ನಲ್ಲಿ ಚಾನೆಲ್ ತೆರೆದಿದ್ದಾರೆ.

By

Published : Jun 9, 2021, 7:34 AM IST

Jangate YouTube channel launch
ಜಾಂಗಟೆ ಯೂಟ್ಯೂಬ್ ಚಾನೆಲ್

ಮುದ್ದೇಬಿಹಾಳ (ವಿಜಯಪುರ): ಕೊರೊನಾ ಎರಡನೇ ಅಲೆಯ ಹರಡುವಿಕೆಯಿಂದಾಗಿ ಎಲ್ಲ ಶಾಲೆಗಳು ಬಾಗಿಲು ಹಾಕಿಕೊಂಡಿವೆ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಈ ನಡುವೆ ವಿದ್ಯಾರ್ಥಿಗಳಿಗೆ ಖುಷಿಯ ಸಮಾಚಾರವೊಂದು ಬಂದಿದೆ.

‘ಜಾಂಗಟೆ’ ಯೂಟ್ಯೂಬ್ ಚಾನೆಲ್ ರೂಪಿಸಿದ ಶಿಕ್ಷಕರು

ತಾಲೂಕಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಬ್ಬರು ಯೂಟ್ಯೂಬ್(Youtube) ಚಾನೆಲ್‌ವೊಂದನ್ನು ಬಳಸಿಕೊಂಡು ಮಕ್ಕಳಿಗೆ ಅವರಿದ್ದಲ್ಲಿಯೇ ಪಾಠಗಳನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ರಾಜ್ಯದ ಯಾವುದೇ ಮೂಲೆಯಿಂದ ಶಿಕ್ಷಕರು 1ರಿಂದ 7ನೇ ತರಗತಿಯ ಪಾಠದ ಪರಿಕಲ್ಪನೆ ಹೊಂದಿರುವ ವಿಡಿಯೋ ಕಳಿಸಿದ್ದಲ್ಲಿ ಅದನ್ನು ‘ಜಾಂಗಟೆ’ ಚಾನೆಲ್​ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಇದರಿಂದ ಒಂದೇ ಊರಿನ ಮಕ್ಕಳು ಪಾಠದ ಚಟುವಟಿಕೆಯಲ್ಲಿ ಭಾಗಿಯಾಗದೇ ಇಡೀ ರಾಜ್ಯದ ಮಕ್ಕಳಿಗೆ ಕಲಿಕೆಯ ಸಾಮಗ್ರಿಯಾಗಿ ಈ ಚಾನೆಲ್ ವೇದಿಕೆ ಕಲ್ಪಿಸಲಿದೆ ಎಂಬ ನಿರೀಕ್ಷೆಯನ್ನು ಜಾಂಗಟೆ ತಂಡ ಇಟ್ಟುಕೊಂಡಿದೆ. ಶಾಲೆಗಳ ಪಾಠಗಳಿಗೆ ಸಂಬಂಧಿಸಿದ ಪರಿಕಲ್ಪನೆಯುಳ್ಳ ವಿಡಿಯೋಗಳನ್ನು ಮೊಬೈಲ್‌ 8762454239 ಸಂಖ್ಯೆಗೆ ಕಳಿಸಬಹುದಾಗಿದೆ.

ಮುದ್ದೇಬಿಹಾಳ ತಾಲೂಕಿನ ಗುಡದಿನ್ನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ಚಲವಾದಿ ಹಾಗೂ ಬಸರಕೋಡದ ಎಂಎಸ್​ಬಿಎನ್ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ಗೋಂಧಳೆ ಅವರು ಸೇರಿಕೊಂಡು ಜಾಂಗಟೆ ಶೀರ್ಷಿಕೆಯಡಿ ಯೂಟ್ಯೂಬ್‌ನಲ್ಲಿ ಚಾನೆಲ್ ತೆರೆದು ಅದರಲ್ಲಿ ಶಾಲೆಯ ಮಕ್ಕಳು ಇರುವ ಕಡೆಗಳಲ್ಲಿಯೇ ತೆರಳಿ ಒಂದೊಂದು ಪಾಠದ ಪರಿಕಲ್ಪನೆಯನ್ನು ತಾವೇ ಅವರಿಗೆ ಕಲಿಸಿ ಅದನ್ನು ವಿಡಿಯೋ ಮಾಡಿ ಯೂಟ್ಯೂಬ್​ನಲ್ಲಿ ಪ್ರಕಟಿಸುವ ಕೆಲಸ ಮಾಡುತ್ತಿದ್ದಾರೆ.

ಜೂನ್‌ 5 ರಿಂದ ಪರಿಸರ ಕುರಿತಾದ ಪಾಠ ಹಾಗೂ ಚಿಣ್ಣರಿಗೆ ವಿಶೇಷ ಮಾರ್ಗದರ್ಶನ ನೀಡುವ ಶಾಲಾ ಪಾಠಗಳನ್ನು ಹಾಕುವ ಮೂಲಕ ಮಕ್ಕಳು ಮನೆಯಲ್ಲಿಯೇ ಕುಳಿತು ತಮ್ಮ ಶಿಕ್ಷಕರ ಪಾಠಗಳನ್ನು ಅಭ್ಯಸಿಸುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಇದರಿಂದ ಶಾಲಾ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹಾಗೂ ನಿರಂತರತೆ ಆಗಲಿದೆ ಎಂಬ ಆಶಾ ಭಾವನೆ ಶಿಕ್ಷಕರಲ್ಲಿ ಮೂಡಿದೆ.

ಜಾಂಗಟೆ ಹೆಸರಿನ ಈ ಯೂಟ್ಯೂಬ್ ಚಾನೆಲ್ ಅನ್ನು ಸೋಮವಾರ ಅಧಿಕೃತವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್.ಕರಡ್ಡಿ ಲೋಕಾರ್ಪಣೆಗೊಳಿಸಿದ್ದಾರೆ.

ABOUT THE AUTHOR

...view details