ಕರ್ನಾಟಕ

karnataka

ETV Bharat / state

ವಿಜಯಪುರ: ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಸಿಬಿ ಬಲೆಗೆ

ಸರ್ಕಾರದಿಂದ ಮಂಜೂರಾದ ಸಾಲ ಪಡೆದುಕೊಳ್ಳಲು ಲಂಚಕ್ಕೆ ಬೇಡಿಕೆ ಇಟ್ಟ ವಿಜಯಪುರ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಸಿಬಿ ಬಲೆಗೆ ಬಿದ್ದಿದ್ದಾನೆ.

By

Published : Jan 13, 2021, 7:36 AM IST

ACB
ವಿಜಯಪುರ

ವಿಜಯಪುರ:ಸರ್ಕಾರದ ಸಬ್ಸಿಡಿ ಹಣ ಮಂಜೂರು ಮಾಡಿಸಲು 1.45 ಲಕ್ಷ ಲಂಚಕ್ಕೆ ಬೇಡಿಕೆ ಹಿನ್ನೆಲೆಯಲ್ಲಿ ವಿಜಯಪುರ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದಣ್ಣ ಟಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ವಿಜಯಪುರ ಎಸಿಬಿ ಕಾರ್ಯಾಚರಣೆಯಲ್ಲಿ ಸಿದ್ದಣ್ಣ ಸಾಕ್ಷ ಸಮೇತ ಸಿಕ್ಕಿ ಹಾಕಿಕೊಂಡಿದ್ದಾರೆ. ಜಿಲ್ಲಾ ಕೈಗಾರಿಕಾ ಕೇಂದ್ರ (ಕೆಐಎಡಿಬಿ)ಯ ವ್ಯಾಪ್ತಿಯಲ್ಲಿ ವಿಜಯಕುಮಾರ್ ಮನ್ಸೂರ್ ಅವರು ತಮ್ಮ ಪತ್ನಿ ಹೆಸರಿನಲ್ಲಿ ಮೆ. ನಂದಿ ಅಗ್ನಿ ಫುಡ್ ಇಂಡಸ್ಟ್ರೀಸ್ (ಶುದ್ದ ಕುಡಿಯುವ ನೀರಿನ ಘಟಕ) ಖರೀದಿ ಮಾಡಿದ್ದರು. ಸಂಗನಗೌಡ‌ ಪಾಟೀಲ ಎಂಬುವರಿಂದ ಖರೀದಿಸಿದ್ದು, ಇದರ ಮೇಲೆ 20.87 ಲಕ್ಷ ಸರ್ಕಾರದಿಂದ ಸಾಲ ಮಂಜೂರು ಆಗಿತ್ತು. ಸಾಲ ನೀಡುವ ಬ್ಯಾಂಕ್​ಗೆ ಸಿದ್ದಣ್ಣ ಸಾಲ ನೀಡದಂತೆ ಪತ್ರ ಬರೆದಿದ್ದರು. ಅಲ್ಲದೇ, ತಮಗೆ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ:ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿವಾದ; ತನ್ನ ಹೊಟ್ಟೆಗೆ ತಾನೇ ಚುಚ್ಚಿಕೊಂಡ ಅಣ್ಣ

ಈ ಕುರಿತು ಮನ್ಸೂರ್ ಅವರು ಎಸಿಬಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮೇಗೌಡ ಅವರ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸ್ ಉಪಾಧೀಕ್ಷಕ ಎಂ.ಕೆ. ಗಂಗಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ABOUT THE AUTHOR

...view details