ಕರ್ನಾಟಕ

karnataka

ಅಸಮರ್ಪಕ ವಿದ್ಯುತ್​ ಪೂರೈಕೆ.. ಹೆಸ್ಕಾಂ ಸೆಕ್ಷನ್ ಅಧಿಕಾರಿ ಮೇಲೆ ರೈತರಿಂದ ಹಲ್ಲೆ ಯತ್ನ

ವಿದ್ಯುತ್ ವ್ಯತ್ಯಯದಿಂದ ಆಕ್ರೋಶ-​ಹೆಸ್ಕಾಂ ವಿರುದ್ಧ ರೈತರ ಪ್ರತಿಭಟನೆ- ಅಧಿಕಾರಿ ಮೇಲೆ ಹಲ್ಲೆ ಯತ್ನ

By

Published : Jul 4, 2022, 1:33 PM IST

Published : Jul 4, 2022, 1:33 PM IST

formers protest
ಅಸಮರ್ಪಕ ವಿದ್ಯುತ್​ ಪೂರೈಕೆ ಹಿನ್ನೆಲೆ ಹೆಸ್ಕಾಂ ಸೆಕ್ಷನ್ ಅಧಿಕಾರಿ ಮೇಲೆ ರೈತರ ಹಲ್ಲೆ

ಮುದ್ದೇಬಿಹಾಳ: ತಾಲೂಕಿನ ಮಡಿಕೇಶ್ವರ ಗ್ರಾಮಕ್ಕೆ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಭಾನುವಾರ ರೈತರು ಪ್ರತಿಭಟನೆ ನಡಸಿದ್ದಾರೆ. ಈ ವೇಳೆ ಸಹನೆ ಕಳೆದುಕೊಂಡ ಕೆಲ ರೈತರು ಸೆಕ್ಷನ್ ಅಧಿಕಾರಿ ಮಲ್ಲಿಕಾರ್ಜುನ ಗೇಡಿ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಲ್ಲದೇ ಹಲ್ಲೆಗೂ ಮುಂದಾಗಿದ್ದ ಘಟನೆ ತಾಲೂಕಿನ ಢವಳಗಿ ಗ್ರಾಮದಲ್ಲಿ ನಡೆದಿದೆ.

ಈ ವಿಷಯವನ್ನು ತಿಳಿದ ಢವಳಗಿಯ ಪ್ರಗತಿಪರ ರೈತ ಮುಖಂಡ ಸಿದ್ದನಗೌಡ ಬಿರಾದಾರ​ ಅವರು, ಮಡಿಕೇಶ್ವರ ರೈತ ಪ್ರಮುಖರೊಂದಿಗೆ ಮಾತನಾಡಿ, ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಅಧಿಕಾರಿಗಳ ಜೊತೆಗೆ ಕುಳಿತು ಏನೇ ಸಮಸ್ಯೆ ಇದ್ದರು ಬಗೆಹರಿಸಿಕೊಳ್ಳಿ ಎನ್ನುತ್ತಿದ್ದಂತೆ ಅದನ್ನು ಹೇಳಲು ನೀವ್ಯಾರು ಎಂದು ಅವರೊಂದಿಗೂ ರೈತರು ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಕೆರಳಿದ ಮುಖಂಡ ಸಿದ್ಧನಗೌಡ, ಸೆಕ್ಷನ್ ಅಧಿಕಾರಿ ಗೇಡಿ ಅವರನ್ನು ಆಕ್ರೋಶಗೊಂಡಿದ್ದ ರೈತರ ಮುಂದೆ ತಂದು ನಿಲ್ಲಿಸಿ ಹೊಡೆಯುವಂತೆ ಸವಾಲು ಹಾಕಿದ್ದಾರೆ. ಈ ವೇಳೆ ಢವಳಗಿಯ ರೈತರು, ಮಡಿಕೇಶ್ವರದ ರೈತರ ಮಧ್ಯೆ ತಳ್ಳಾಟ ನಡೆದಿದ್ದು, ಅಧಿಕಾರಿ ಗೇಡಿ ಅವರನ್ನು ಎಳೆದಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪಿಎಸ್​ಐ ರೇಣುಕಾ ಜಕನೂರ ಪ್ರತಿಭಟನಕಾರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಢವಳಗಿ ರೈತ ಮುಖಂಡ ಸಿದ್ಧನಗೌಡ ಬಿರಾದಾರ ಅವರು, ರೈತರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಅವರೊಂದಿಗೆ ಮಾತನಾಡಲು ಸ್ಥಳಕ್ಕೆ ತೆರಳಿದ್ದೆ. ಅವರಿಗೆ ತಿಳಿ ಹೇಳಬೇಕು ಎನ್ನುವಷ್ಟರಲ್ಲಿಯೇ ನನ್ನೊಂದಿಗೂ ವಾಗ್ವಾದ ನಡೆಸಿದ್ದು ಅಲ್ಲದೇ ಮೈ ಮೇಲೆ ಏರಿ ಬಂದಿದ್ದಾರೆ. ಈ ರೀತಿ ಕಾನೂನು ಕೈಗೆ ತೆಗೆದುಕೊಂಡು ಅಧಿಕಾರಿಗಳನ್ನು ಬೆದರಿಸುವ, ಹೆದರಿಸುವ ಕೆಲಸ ಮಾಡಿದರೆ ಅವರಿಗೆ ರೈತರು ಎಂದು ಕರೆಯುವುದಿಲ್ಲ. ಅಂತಹವರನ್ನು ಗುರುತಿಸಿ ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಮಂಗಳೂರಿಗೆ ಮೊದಲ ಬಾರಿ ಆಗಮಿಸಿದ ಮೈನ್​ಲೈನ್ ಕಂಟೈನರ್ ಹಡಗಿಗೆ ಜಲಫಿರಂಗಿ ಸ್ವಾಗತ

ABOUT THE AUTHOR

...view details