ಮುದ್ದೇಬಿಹಾಳ: ಕಬ್ಬಿನ ಗದ್ದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಹತ್ತಾರು ಎಕರೆ ಪ್ರದೇಶದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಬೈಲಕೂರ ಗ್ರಾಮದಲ್ಲಿ ನಡೆದಿದೆ.
ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: 10 ಎಕರೆ ಬೆಳೆ ನಾಶ - Fire on sugarcane
ಯಾರೋ ಕಿಡಿಗೇಡಿಗಳು ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದು, ಪರಿಣಾಮ 10 ಎಕರೆ ಕಬ್ಬು ನಾಶವಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಭಾರಿ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಿದ್ದರೂ ಎರಡು ವಾಹನಗಳನ್ನು ತರಿಸಿಕೊಳ್ಳಿ ಎಂದು ರೈತರು ಮನವಿ ಮಾಡಿಕೊಂಡರೂ ತರಲಿಲ್ಲ. ಹಾಗೆಯೇ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ತ್ವರಿತವಾಗಿ ಕರೆತರಲಿಲ್ಲ ಎಂದು ಸಿಟ್ಟಾದ ರೈತರು ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಪ್ರಮೋದ್ ಸುಂಕದ ವಿರುದ್ಧ ಹರಿಹಾಯ್ದರು.
ಸ್ಥಳಕ್ಕೆ ಭೇಟಿ ನೀಡಿದ ಪಿಎಸೈ ರೇಣುಕಾ ಜಕನೂರ ಆಕ್ರೋಶಗೊಂಡಿದ್ದ ರೈತರನ್ನು ಸಮಾಧಾನಪಡಿಸಿದರು. ಬೈಲಕೂರ ಗ್ರಾಮದ ರೈತ ಗುರುಸಂಗಪ್ಪ ಎನ್.ಪಂಪಣ್ಣವರ ಅವರಿಗೆ ಸೇರಿದ 10 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.
Last Updated : Nov 9, 2021, 9:44 PM IST