ಕರ್ನಾಟಕ

karnataka

ETV Bharat / state

ರಾಜ್ಯೋತ್ಸವದಂದು ಕೊರೊನಾ ವಾರಿಯರ್ಸ್‌, ಪತ್ರಕರ್ತರಿಗೆ ಸನ್ಮಾನ - kanada rajyostava celebration

ರಾಜ್ಯ ಸರ್ಕಾರದ ಸೂಚನೆಯಂತೆ ಮುದ್ದೇಬಿಹಾಳ ತಾಲೂಕಿನಲ್ಲಿ ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುವುದು ಎಂದು ತಹಶೀಲ್ದಾರ್​ ಜಿ.ಎಸ್.ಮಳಗಿ ತಿಳಿಸಿದ್ದಾರೆ.

felicitated for Journalists and corona Warriors on Kannada rajyostava
ರಾಜ್ಯೋತ್ಸವದಂದು ಕೊರೊನಾ ವಾರಿಯರ್ಸ್‌, ಪತ್ರಕರ್ತರಿಗೆ ಸನ್ಮಾನ

By

Published : Oct 22, 2020, 4:54 PM IST

ಮುದ್ದೇಬಿಹಾಳ (ವಿಜಯಪುರ):ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಪತ್ರಕರ್ತರು ಹಾಗೂ ಕೊರೊನಾ ವಾರಿಯರ್ಸ್​ ಸನ್ಮಾನಿಸಲಾಗುವುದು ಎಂದು ತಹಶೀಲ್ದಾರ್​ ಜಿ.ಎಸ್.ಮಳಗಿ ತಿಳಿಸಿದ್ದಾರೆ.

ರಾಜ್ಯೋತ್ಸವದಂದು ಕೊರೊನಾ ವಾರಿಯರ್ಸ್‌, ಪತ್ರಕರ್ತರಿಗೆ ಸನ್ಮಾನ

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸರಳ ಕನ್ನಡ ರಾಜ್ಯೋತ್ಸವ ಆಚರಣೆಗೆ ಸೂಚನೆ ನೀಡಿದ್ದು, ಹಲವು ಮಾರ್ಗಸೂಚಿ ಕ್ರಮಗಳನ್ನು ನೀಡಿದೆ. ಅದರಂತೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಆರೋಗ್ಯ ಇಲಾಖೆಯಿಂದ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಹಾಗು ಸ್ಯಾನಿಟೈಸರ್ ಅನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಈ ವೇಳೆ ಕೊರೊನಾ ಸಂಕಷ್ಟದ ಸಮಯದಲ್ಲಿ ವಾರಿಯರ್ಸ್​ಗಳಾಗಿ ತಾಲೂಕಾಡಳಿತದೊಂದಿಗೆ ಸೇವೆ ಸಲ್ಲಿಸಿದ ಪತ್ರಕರ್ತರು ಹಾಗೂ ಕೊರೊನಾ ವಾರಿಯರ್ಸ್​ಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details