ಕರ್ನಾಟಕ

karnataka

ETV Bharat / state

ಪ್ರೀತಿಸಿದ ಯುವಕನ ಕೈ ಬಿಡದ ಯುವತಿ.. ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ

ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಯತ್ನ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.

ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ

By

Published : Aug 2, 2019, 9:21 AM IST

ವಿಜಯಪುರ:ತಂದೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬ ಯುವಕನನ್ನ ಪ್ರೀತಿಸುತ್ತಿದ್ದಾಳೆ ಎಂದು ತಂದೆಯೇ ಮಗಳ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ರಾಮತೀರ್ಥ ತಾಂಡಾದ ಯುವತಿ ಅದೇ ಗ್ರಾಮದ ಯುವಕನನ್ನು ಪ್ರಿತಿಸಿದ ತಪ್ಪಿಗೆ ಆಕೆಯೆ ತಂದೆಯೇ ಪುತ್ರಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ರಾಮತೀರ್ಥ ತಾಂಡಾದಲ್ಲೆ ಇರುವ ಅವರ ಸಂಬಂಧಿಯನ್ನೇ ಯುವತಿ ಪ್ರೀತಿಸುತ್ತಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆಕೆಯ ತಂದೆ, ಆ ಯುವಕನ ಸಹವಾಸ ಬಿಟ್ಟುಬಿಡು ಎಂದು ತಿಳಿಸಿದ್ದಾನೆ. ಜೊತೆಗೆ ಯುವಕನಿಗೂ ಬುದ್ದಿ ಹೇಳಿದ್ದಾನೆ

ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ

ಆದ್ರೆ, ತಂದೆಯ ಮಾತಿಗೆ ಕ್ಯಾರೆ ಅನ್ನದೇ, ಜುಲೈ 29 ರಂದು ಯುವಕ ಹಾಗೂ ಯುವತಿ ಮನೆಯೊಂದರಲ್ಲಿ ಏಕಾಂತವಾಗಿ ಕುಳಿತಿದ್ದಾಗ ರೆಡಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ಅವರಿಬ್ಬರು ಕುಳಿತಿದ್ದ ಮನೆಗೆ ಹೊರಗಡೆಯಿಂದ ಬೀಗ ಹಾಕಿ, ತಮ್ಮ ಸಂಬಂಧಿಗಳಿಗೆ ವಿಷಯ ತಿಳಿಸಿದ್ದಾನೆ. ಅಷ್ಟರಲ್ಲಾಗಲೇ ಸ್ಥಳಕ್ಕೆ ಬಂದ ಊರಿನ ಹಿರಿಯರು, ಬುದ್ದಿ ಮಾತು ಹೇಳಿ ಬೀಗ ತೆಗೆದಿದ್ದರಂತೆ. ಅದೇ ದಿನ ಸಾಯಂಕಾಲ ಸಿಟ್ಟಿನಲ್ಲಿ ತನ್ನ ಮಗಳು ಮನೆಯ ಮರ್ಯಾದೆ ಕಳೆಯುತ್ತಿದ್ದಾಳೆ ಎಂದು ಚಾಕುವಿನಿಂದ ಪುತ್ರಿಗೆ ಮನ ಬಂದಂತೆ ಇರಿದಿದ್ದಾನೆ ಎನ್ನಲಾಗಿದೆ. ಆದ್ರೆ ಕುಟುಂಬಸ್ಥರು ಮಾತ್ರ ಯಾವುದೇ ಮರ್ಯಾದಾ ಹತ್ಯೆ ಯತ್ನ ನಡೆದಿಲ್ಲ ಎಂದು ಹೇಳುತ್ತಿದ್ದಾರೆ

ಹಲ್ಲೆ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ಗ್ರಾಮಸ್ಥರು ಹಾಗೂ ಸಂಬಂಧಿಗಳು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ತುರ್ತು ಚಿಕಿತ್ಸೆ ನಂತರ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೈ, ಕಾಲುಗಳಿಗೆ, ಹೊಟ್ಟೆ, ಎದೆಯ ಭಾಗ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ.

ಘಟನೆ ಸಂಬಂಧ ಹೊರ್ತಿ ಪೊಲೀಸ್ ಠಾಣೆಯಲ್ಲಿ ಯುವತಿ ಸಂಬಂಧಿಗಳು ಆಕೆಯ ತಂದೆ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ ಯುವತಿ ತಂದೆಯನ್ನ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್​ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.

ABOUT THE AUTHOR

...view details