ಕರ್ನಾಟಕ

karnataka

ETV Bharat / state

ಬೆಳೆ ಹಾನಿ ನೋಡಲು ಹೋಗಿ ಮಳೆ ನೀರಲ್ಲಿ ಕೊಚ್ಚಿ ಹೋದ ರೈತ - Vijayapura farmer's missing

ಭಾರಿ ಮಳೆ ಬಿದ್ದ ಕಾರಣ ಬೆಳೆದ ಬೆಳೆಯ ಹಾನಿ ಪ್ರಮಾಣವನ್ನು ನೋಡಲು ಹೊಲಕ್ಕೆ ತೆರಳುತ್ತಿದ್ದ ರೈತನೊಬ್ಬ ರಭಸವಾಗಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ನಡೆದಿದೆ.

Vijayapura: A farmer who went to watch the crop damage is missing
ವಿಜಯಪುರ: ಬೆಳೆ ಹಾನಿ ವೀಕ್ಷಿಸಲು ಹೋದ ರೈತ ನಾಪತ್ತೆ

By

Published : Oct 15, 2020, 12:19 PM IST

ವಿಜಯಪುರ:ಭಾರಿ ಮಳೆಯಾದ ಕಾರಣ ಬೆಳೆ ಹಾನಿ ಪ್ರಮಾಣವನ್ನು ನೋಡಲು ಹೊಲಕ್ಕೆ ತೆರಳುತ್ತಿದ್ದ ರೈತನೊಬ್ಬ ರಭಸವಾಗಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ನಡೆದಿದೆ.

ಬೆಳಗ್ಗೆ 7.30ರ ಸುಮಾರಿಗೆ ಮುಳಸಾವಳಗಿ ಗ್ರಾಮದ ಶಿವಪುತ್ರ ಹಣಮಂತ ನಾಟೀಕಾರ ಎಂಬ ರೈತ ತನ್ನ ಹೊಲಕ್ಕೆ ಹೊರಟಿದ್ದ. ಈ ವೇಳೆ ಹಳ್ಳದಲ್ಲಿ ಸಂಚರಿಸುವಾಗ ಪ್ರವಾಹ ಹೆಚ್ಚಾಗಿದ್ದು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಘಟನಾ ಸ್ಥಳಕ್ಕೆ ಸಿಂದಗಿ ತಹಶೀಲ್ದಾರ್ ಸಂಜೀವ ಕುಮಾರ ದಾಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ರೈತನ ಹುಡುಕಾಟ ಮುಂದುವರೆದಿದೆ.

ABOUT THE AUTHOR

...view details