ಮುದ್ದೇಬಿಹಾಳ: ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿಯ ಆವರಣದಲ್ಲಿರುವ ಕಾರ್ಗಿಲ್ ಹುತಾತ್ಮ ವೀರ ಯೋಧ ದಾವಲಸಾಬ ಕಂಬಾರ ಅವರ ಸ್ಮಾರಕದ ಕುರಿತು ಈಟಿವಿ ಭಾರತನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಭಾನುವಾರ ಬೆಳಗ್ಗೆಯೇ ಪುರಸಭೆಯ ಸಿಬ್ಬಂದಿ ಸ್ಮಾರಕದ ಸುತ್ತಮುತ್ತಲಿದ್ದ ತಳ್ಳುಗಾಡಿಗಳು, ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಈಟಿವಿ ಭಾರತ ಫಲಶ್ರುತಿ: ಹುತಾತ್ಮ ಯೋಧರ ಸ್ಮಾರಕದ ಶುಚಿತ್ವಕ್ಕೆ ಮುಂದಾದ ಪುರಸಭೆ ಸಿಬ್ಬಂದಿ - ಹುತಾತ್ಮ ಯೋಧರ ಸ್ಮಾರಕದ ಶುಚಿತ್ವಕ್ಕೆ ಮುಂದಾದ ಪುರಸಭೆ ಸಿಬ್ಬಂದಿ
ಕಾರ್ಗಿಲ್ ಹುತಾತ್ಮ ವೀರ ಯೋಧ ದಾವಲಸಾಬ ಕಂಬಾರ ಅವರ ಸ್ಮಾರಕದ ಸುತ್ತಮುತ್ತಲು ಕೊಳಚೆ ನಿರ್ಮಾಣವಾಗಿದ್ದು, ದೇಶ ಭಕ್ತರ ಬಗ್ಗೆ ಅಭಿಮಾನ ಮೂಡಿಸಬೇಕಿದ್ದ ಸ್ಮಾರಕವನ್ನು ಕೆಲವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಸ್ಮಾರಕ ನಿರ್ಮಾಣ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಮಾರದ ನಿರ್ಲಕ್ಷ್ಯ ಕುರಿತು ಈಟಿವಿ ಭಾರತ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು.
ಸ್ಮಾರಕದ ಸುತ್ತಮುತ್ತಲು ಕೊಳಚೆ ನಿರ್ಮಾಣವಾಗಿದ್ದು, ದೇಶ ಭಕ್ತರ ಬಗ್ಗೆ ಅಭಿಮಾನ ಮೂಡಿಸಬೇಕಿದ್ದ ಸ್ಮಾರಕವನ್ನು ಕೆಲವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಸ್ಮಾರಕ ನಿರ್ಮಾಣ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಮಾರದ ನಿರ್ಲಕ್ಷ್ಯ ಕುರಿತು ಈಟಿವಿ ಭಾರತ್ನಲ್ಲಿ ವಿಸ್ತೃತ ವರದಿ ಬಿತ್ತರವಾಗುತ್ತಿದ್ದಂತೆ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ನೇತೃತ್ವದಲ್ಲಿ ಸಿಬ್ಬಂದಿ ಮಹಾಂತೇಶ ಕಟ್ಟಿಮನಿ, ಬಸವರಾಜ ಬಾಗಲಕೋಟ ಅವರು ತಮ್ಮ ಪೌರಕಾರ್ಮಿಕರೊಂದಿಗೆ ಸ್ಮಾರಕದ ಸುತ್ತಮುತ್ತಲಿನ ವಾತಾವರಣ ಶುಚಿಗೊಳಿಸಿದ್ದು, ಗರಸು ಮಣ್ಣು ಹಾಕಿ ಕೊಳಚೆಯನ್ನು ಮುಚ್ಚಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸ್ಮಾರಕ ನಿರ್ಮಾಣ ಸಮಿತಿಯ ಸಂಚಾಲಕ ಬಸವರಾಜ ನಂದಿಕೇಶ್ವರಮಠ ಹಾಗೂ ಉಪಾಧ್ಯಕ್ಷ ಚಂದ್ರಶೇಖರ ಕಲಾಲ ಅವರು, ವರದಿ ಪ್ರಸಾರವಾಗಿರುವುದಕ್ಕೆ ಎಚ್ಚೆತ್ತು ಅಧಿಕಾರಿಗಳು ಇಂದು ಧ್ವಜಾರೋಹಣ ಮಾಡಿಕೊಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟು ಸ್ಮಾರಕದ ಸೌಂದರ್ಯಕ್ಕೆ ಧಕ್ಕೆ ತರುವ ಕೆಲಸ ಆಗಬಾರದು. ಸೈನಿಕರಿಗೆ ಅವಮಾನಿಸುವ ಕೆಲಸ ಆಗದಂತೆ ಅಧಿಕಾರಿಗಳು ಮಾಡಲಿ ಎಂದು ಮನವಿ ಮಾಡಿದರು.