ಮುದ್ದೇಬಿಹಾಳ (ವಿಜಯಪುರ): ಕೋವಿಡ್ ವಾರ್ಡ್ ಪಕ್ಕದಲ್ಲಿದ್ದ ಡಯಾಲಿಸಿಸ್ ಕೇಂದ್ರಕ್ಕೆ ಔಷಧ ಕೊರತೆ ಎದುರಾಗಿತ್ತು. ಇದೀಗ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಈಟಿವಿ ಭಾರತ್ನಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ಡಯಾಲಿಸಿಸ್ ಕೇಂದ್ರಕ್ಕೆ ಔಷಧ ಪೂರೈಸಲಾಗಿದೆ.
ಇದೇ ಮೇ 30ರಂದು ‘ಡಯಾಲಿಸಿಸ್ ಕೇಂದ್ರಕ್ಕೆ ಔಷಧಿ ಪೂರೈಸುವಂತೆ ಕೈ ಮುಗಿದು ಬೇಡಿಕೊಂಡ ರೋಗಿಗಳು’ ಎಂಬ ಶೀರ್ಷಿಕೆಯಡಿ ವರದಿ ಪ್ರಸಾರವಾಗಿತ್ತು. ಈ ವರದಿ ಗಮನಿಸಿದ್ದ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಿಲ್ಕುಮಾರ್ ಶೇಗುಣಸಿ 15 ದಿನಗಳಿಗೆ ಸಾಕಾಗುವಷ್ಟು ಔಷಧ ಪೂರೈಸಿದ್ದಾರೆ.