ಮುದ್ದೇಬಿಹಾಳ :ಕಳೆದ ವಾರದಿಂದಷ್ಟೇ ವಿಜಯಪುರ ಜಿಲ್ಲೆಯಾದ್ಯಂತ ಭೂಕಂಪನದ ಸುದ್ದಿ ಸುದ್ದು ಮಾಡಿದ ಬೆನ್ನಲ್ಲೇ ತಾಲೂಕಿನಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿರುವ ಘಟನೆ ನಡೆದಿದೆ.
ತಾಲೂಕಿನ ಢವಳಗಿ ಗ್ರಾಮದಲ್ಲಿ ಮಧ್ಯಾಹ್ನ 12.47ರ ಸುಮಾರಿಗೆ 2-3 ಸೆಕೆಂಡಗಳ ಕಾಲ ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರಿಗೆ ಆಗಿದೆ. ಕೆಲವರ ಮನೆಯಲ್ಲಿ ಪಾತ್ರೆಗಳು ಕೆಳಕ್ಕೆ ಬಿದ್ದಿರುವ ಘಟನೆಯೂ ಬೆಳಕಿಗೆ ಬಂದಿದೆ.