ಮುದ್ದೇಬಿಹಾಳ(ವಿಜಯಪುರ):ತಾಲೂಕಿನ ಮಲಗಲದಿನ್ನಿಗೆ ತೆರಳುವ ರಸ್ತೆ ಮಧ್ಯೆ ಅಗೆದಿದ್ದ ಗುಂಡಿಯನ್ನು ಕೊನೆಗೂ ಗುತ್ತಿಗೆದಾರರು ದುರಸ್ತಿ ಪಡಿಸಿದ್ದಾರೆ.
ಕಳೆದ ಒಂದು ತಿಂಗಳ ಕಾಲ ರಸ್ತೆ ಅಗೆದು ಹಾಗೆ ಬಿಟ್ಟಿದ್ದ, ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ‘ಈಟಿವಿ ಭಾರತ’ ದಲ್ಲಿ ಮೇ 23 ರಂದು ‘15 ಮೀಟರ್ ರಸ್ತೆ ದಾಟಲು ಒಂದೂವರೆ ಕಿ.ಮೀ ಸಂಚರಿಸಬೇಕು’ ಎಂಬ ಶೀರ್ಷಿಕೆಯಡಿ ವರದಿ ಬಿತ್ತರಿಸಲಾಗಿತ್ತು. ಇದನ್ನು ಗಮನಿಸಿದ ಕೆಬಿಜೆಎನ್‌ಎಲ್ ಅಧಿಕಾರಿ ಎಂ.ಸಿ.ಡೊಳ್ಳಿ ಅವರು ಗುತ್ತಿಗೆದಾರರಿಗೆ ಸೂಚಿಸಿ ಕಾಲುವೆಗೆ ಎರಡು ದೊಡ್ಡ ಸಿಮೆಂಟ್ ಪೈಪ್‌ಗಳನ್ನು ಹಾಕಿ ರಸ್ತೆಯನ್ನು ದುರಸ್ತಿ ಮಾಡಿಸಿದ್ದಾರೆ.