ಕರ್ನಾಟಕ

karnataka

ETV Bharat / state

ರಾಜ್ಯಮಟ್ಟದ ಸೈಕ್ಲಿಂಗ್... ವಿಜಯಪುರ ಕ್ರೀಡಾನಿಲಯಕ್ಕೆ ಸಮಗ್ರ ಪ್ರಶಸ್ತಿ

ವಿಜಯಪುರದಲ್ಲಿ ನಡೆದ 15ನೇ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನಶಿಪ್​ನಲ್ಲಿ ವಿಜಯಪುರದ ಕ್ರೀಡಾನಿಲಯ 91ಅಂಕ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.

By

Published : Sep 16, 2019, 12:58 AM IST

ಸೈಕ್ಲಿಂಗ್ ಸ್ಪರ್ಧೆ: ವಿಜಯಪುರ ಕ್ರೀಡಾನಿಲಯಕ್ಕೆ ಸಮಗ್ರ ಪ್ರಶಸ್ತಿ

ವಿಜಯಪುರ: ಜಿಲ್ಲೆಯಲ್ಲಿ ನಡೆದ 15ನೇ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್​​ಶಿಪ್​ನಲ್ಲಿ ವಿಜಯಪುರದ ಕ್ರೀಡಾನಿಲಯ 91 ಅಂಕ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ತನ್ನ ಸೈಕ್ಲಿಂಗ್​ನಲ್ಲಿ ಪಾರುಪತ್ಯ ಮುಂದುವರೆಸಿದೆ.

ಮೈಸೂರು 36 ಅಂಕ ಗಳಿಸುವ ಮೂಲಕ ರನ್ನರ್​ ಅಪ್​ಗೆ ತೃಪ್ತಿಕೊಳ್ಳಬೇಕಾಯಿತು. ಚಾಂಪಿಯನಶಿಪ್​ನಲ್ಲಿ ರಾಜ್ಯದ ಮೂಲೆ ಮೂಲೆಯಿಂದ 125 ಸೈಕ್ಲಿಸ್ಟ್​​ಗಳು ಭಾಗವಹಿಸಿದ್ರು. ಕರ್ನಾಟಕ ಅಮೇಚ್ಯೂರ್​​ ಸೈಕ್ಲಿಂಗ್ ಅಸೋಸಿಯೇಷನ್ ಹಾಗೂ ವಿಜಯಪುರ ಅಮೇಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಡೆದ 2 ದಿನಗಳ ಈ ಸೈಕ್ಲಿಂಗ್ ಚಾಂಪಿಯನಶಿಪ್​ನಲ್ಲಿ ಮಹಿಳೆಯರ ವಿಭಾಗದಲ್ಲಿ ಇಬ್ಬರು ಕ್ರೀಡಾಪಟುಗಳು ತಲಾ ಮೂರು ಚಿನ್ನದ ಪದಕ ಗಳಿಸಿ ಗಮನ ಸೆಳೆದರು.

ಸೈಕ್ಲಿಂಗ್ ಸ್ಪರ್ಧೆ: ವಿಜಯಪುರ ಕ್ರೀಡಾನಿಲಯಕ್ಕೆ ಸಮಗ್ರ ಪ್ರಶಸ್ತಿ

14, 16, ಬಾಲಕ ಹಾಗೂ ಬಾಲಕಿಯರಿಗಾಗಿ 4.5 ಕಿ.ಮೀ ಅಂತರದ ಮತ್ತು18 ವರ್ಷದ ಪುರುಷರಿಗಾಗಿ 9 ಕಿ.ಮೀ. ಅಂತರದ ಮೌಂಟೆನ್​​ ಬೈಕ್ ಸೈಕ್ಲಿಂಗ್ ಆಯೋಜಿಸಲಾಗಿತ್ತು. ಇಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ 32 ಸೈಕ್ಲಿಸ್ಟ್​​ಗಳು ಮುಂದಿನ ತಿಂಗಳು ಪೂನಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್​​ಶಿಪ್​ನಲ್ಲಿ ಭಾಗವಹಿಸಲಿದ್ದಾರೆ.

ABOUT THE AUTHOR

...view details