ಕರ್ನಾಟಕ

karnataka

ETV Bharat / state

ಮಾನವೀಯತೆ ಬರೀ ಮಾತಲ್ಲೇ? ಗೋಮಾತೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಲಿಲ್ಲ ಮುದ್ದೇಬಿಹಾಳ ಜನತೆ! - cow died at muddebihal

ಗೋವೊಂದು ಕರುವಿಗೆ ಜನ್ಮ ನೀಡಿ ಅಸುನೀಗಿದೆ. ಬಳಿಕ ಯಾವುದೇ ಸಂಘಟನೆಯಾಗಲಿ, ಗೋ ಪ್ರಿಯರಾಗಲಿ ಅದರ ಅಂತ್ಯಸಂಸ್ಕಾರ ನಡೆಸಲು ಮುಂದೆ ಬಂದಿಲ್ಲ. ಮಾನವೀಯತೆ ಮಾತಿನಲ್ಲಿ ಮಾತ್ರ ಇದೆಯೇ? ಎಂಬ ಮಾತುಗಳು ಕೇಳಿ ಬಂದಿವೆ.

cow died at muddebihal after giving birth to calf
ಮಾನವೀಯತೆ ಬರೀ ಮಾತಲ್ಲೇ? ಗೋಮಾತೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಲಿಲ್ಲ ಮುದ್ದೇಬಿಹಾಳ ಜನತೆ!

By

Published : Jan 21, 2021, 12:46 PM IST

ಮುದ್ದೇಬಿಹಾಳ: ಗೋವೊಂದು ಕರುವಿಗೆ ಜನ್ಮ ನೀಡಿ ಅಸುನೀಗಿದ ಘಟನೆ ಪಟ್ಟಣದ ಬಸವ ನಗರದ ಗಾರ್ಡನ್ ಸಮೀಪದಲ್ಲಿ ನಡೆದಿದೆ.

ಕರುವಿಗೆ ಜನ್ಮ ನೀಡಿ ಪ್ರಾಣ ಬಿಟ್ಟ ಗೋಮಾತೆ

ಬಳಿಕ ಕರು ತನ್ನಿಂದ ತಾನೇ ಮೇಲೆದ್ದು ತನ್ನ ತಾಯಿಯ ಮುಖದ ಬಳಿ ಬಂದು ನೋಡಿ ಅದರ ಸುತ್ತಲೂ ಓಡಾಡಿದ್ದು, ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಬಳಿಕ ಪುರಸಭೆಯವರು ಸಾವನ್ನಪ್ಪಿದ ಆಕಳನ್ನು ಕಸ ಹೇರುವ ವಾಹನದಲ್ಲಿ ತೆಗೆದುಕೊಂಡು ಹೋಗಿ ಊರ ಹೊರಗಡೆ ವಿಲೇವಾರಿ ಮಾಡಿ ಬಂದಿದ್ದಾರೆಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:ಡಾ. ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಸಿಎಂ ಭಾಗಿ: ಸಾರ್ವಜನಿಕರಿಗೆ ಅನ್ನದಾಸೋಹ

ಈ ಹಸುವಿನ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ಮಾಡಲು ಯಾರೂ ಕೂಡ ಮುಂದಾಗಲಿಲ್ಲ. ಮಾನವೀಯತೆ ಮಾತಿನಲ್ಲಿ ಮಾತ್ರ ಇದೆಯೇ? ಎಂಬ ಮಾತುಗಳು ಕೇಳಿ ಬಂದವು.

ABOUT THE AUTHOR

...view details