ಕರ್ನಾಟಕ

karnataka

ETV Bharat / state

ಈಶ್ವರಪ್ಪ ರಾಜೀನಾಮೆಯನ್ನು ಒಲ್ಲದ ಮನಸ್ಸಿನಿಂದ ಪಕ್ಷ ಸ್ವೀಕರಿಸುತ್ತಿದೆ : ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ರಾಜ್ಯದಲ್ಲಿ ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತುಂಬಲಿದ್ದಾರೆ. ಸದ್ಯ ಈಶ್ವರಪ್ಪ ರಾಜೀನಾಮೆ ತೆರವಿನಿಂದ ಖಾಲಿಯಾಗುವ ಸಚಿವ ಸ್ಥಾನ ಸೇರಿ ಐದು ಸ್ಥಾನ ಖಾಲಿ ಇದ್ದು, ಅವನ್ನ ಶೀಘ್ರ ಭರ್ತಿ ಮಾಡಲಾಗುವುದು ಎಂದು ಜೋಶಿ ಇದೇ ವೇಳೆ ತಿಳಿಸಿದರು.

ಈಶ್ವರಪ್ಪ ರಾಜೀನಾಮೆಯನ್ನು ಒಲ್ಲದ ಮನಸ್ದಿನಿಂದ ಪಕ್ಷ ಸ್ವೀಕರಿಸುತ್ತಿದೆ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
ಈಶ್ವರಪ್ಪ ರಾಜೀನಾಮೆಯನ್ನು ಒಲ್ಲದ ಮನಸ್ದಿನಿಂದ ಪಕ್ಷ ಸ್ವೀಕರಿಸುತ್ತಿದೆ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

By

Published : Apr 15, 2022, 12:11 PM IST

Updated : Apr 15, 2022, 12:54 PM IST

ವಿಜಯಪುರ :ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿರುವುದು ಅವರ ಹಾವಭಾವದಿಂದ ಮೇಲ್ನೋಟಕ್ಕೆ ಕಾಣುತ್ತಿದೆ. ಇದರ ಸಮಗ್ರ ತನಿಖೆಯಾಗಬೇಕು. ಸಚಿವ ಕೆ.ಎಸ್​​.ಈಶ್ವರಪ್ಪನವರ ರಾಜೀನಾಮೆಯನ್ನು ನಮ್ಮ ಪಕ್ಷ ಒಲ್ಲದ ಮನಸ್ಸಿನಿಂದ ಸ್ವೀಕರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು.

ಸಚಿವ ಈಶ್ವರಪ್ಪ ರಾಜೀನಾಮೆ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪ್ರತಿಕ್ರಿಯೆ ನೀಡಿರುವುದು..

ನಗರದ ತೊರವಿಯ ಲಕ್ಷ್ಮಿ ನರಸಿಂಹ ದೇವಸ್ಥಾನ ದರ್ಶನಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ತಮ್ಮ ಮೇಲೆ ಬಂದ ಆರೋಪದಿಂದ ಶುದ್ಧ ಹಸ್ತವಾಗಿ ಬರುತ್ತೇನೆ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಇಡೀ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇದರ ಹಿಂದೆ ಬಹುದೊಡ್ಡ ಕುತಂತ್ರ ಅಡಗಿದೆ. ಇದರೊಂದಿಗೆ ಸಿಡಿ ಪ್ರಕರಣದ ತನಿಖೆ ನಡೆಯಬೇಕು. ಸಮಗ್ರ ತನಿಖೆಯಾದರೆ ಸತ್ಯಾಂಶ ಹೊರ ಬೀಳಲಿದೆ ಎಂದರು.

ಶೀಘ್ರವೇ ಸಚಿವ ಸಂಪುಟ ವಿಸ್ತರಣೆ :ರಾಜ್ಯದಲ್ಲಿ ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತುಂಬಲಿದ್ದಾರೆ. ಸದ್ಯ ಈಶ್ವರಪ್ಪ ರಾಜೀನಾಮೆ ತೆರವಿನಿಂದ ಖಾಲಿಯಾಗುವ ಸಚಿವ ಸ್ಥಾನ ಸೇರಿ ಐದು ಸ್ಥಾನ ಖಾಲಿ ಇದ್ದು, ಅವನ್ನ ಶೀಘ್ರ ಭರ್ತಿ ಮಾಡಲಾಗುವುದು ಎಂದು ಜೋಶಿ ಇದೇ ವೇಳೆ ತಿಳಿಸಿದರು.

ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಸಿಎಂ ಬೊಮ್ಮಾಯಿ ನಿರ್ಧರಿಸುತ್ತಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಹೈಕಮಾಂಡ್​ ಜೊತೆ ಸಿಎಂ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಸಿಎಂ ಬದಲಾವಣೆ ಕೇವಲ ವದಂತಿ. ಮುಂದಿನ ಚುನಾವಣೆಯನ್ನು ಸಹ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದರು.

ಇದನ್ನೂ ಓದಿ:ರಾಜೀನಾಮೆಗೂ ಮುನ್ನ ಸಿದ್ದಗಂಗಾ ಮಠಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆಯಲಿರುವ ಸಚಿವ ಈಶ್ವರಪ್ಪ!

Last Updated : Apr 15, 2022, 12:54 PM IST

ABOUT THE AUTHOR

...view details