ಕರ್ನಾಟಕ

karnataka

By

Published : Nov 29, 2020, 10:09 PM IST

ETV Bharat / state

ಮಾಜಿ ಶಾಸಕರ ಸಂಬಂಧಿಯಿಂದ ಬಸ್ ನಿಲ್ದಾಣ ಕಾಮಗಾರಿಗೆ ಅಡ್ಡಿಪಡಿಸಿದ ಆರೋಪ..

ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಕೆಎಸ್‌ಆರ್‌ಟಿಸಿ ಇಂಜಿನಿಯರ್ ಅವರಿಗೆ ಬಸ್ ನಿಲ್ದಾಣ ಹೇಗೆ ಕಟ್ಟುತ್ತೀರಿ ನೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ..

bus-stand-works-band-by-former-mla-relative-news
ಮಾಜಿ ಶಾಸಕರ ಸಂಬಂಧಿಯಿಂದ ಬಸ್ ನಿಲ್ದಾಣ ಕಾಮಗಾರಿ ಬಂದ್ ಆರೋಪ

ಮುದ್ದೇಬಿಹಾಳ :ತಾಲೂಕಿನ ನಾಲತವಾಡದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಮಾಜಿ ಶಾಸಕ ನಾಡಗೌಡರ ಸಂಬಂಧಿ ಅಡ್ಡಿಪಡಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಎಂ ಎಸ್ ಪಾಟೀಲ ಆರೋಪಿಸಿದ್ದಾರೆ.

ಮಾಜಿ ಶಾಸಕರ ಸಂಬಂಧಿಯಿಂದ ಬಸ್ ನಿಲ್ದಾಣ ಕಾಮಗಾರಿ ಬಂದ್ ಆರೋಪ..

ತಾಲೂಕಿನ ಕೇಸಾಪೂರ ಹಾಗೂ ಆಲೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ನಾಲತವಾಡದಲ್ಲಿರುವ ಬಸ್ ನಿಲ್ದಾಣ ಹಾಳಾಗಿದೆ.

ಬಸ್‌ಗಳು ಸಂಚರಿಸಲು ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಗಿರುವುದನ್ನು ಗಮನದಲ್ಲಿರಿಸಿ ಹಾಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಅಂದಾಜು 3.50 ಕೋಟಿ ರೂ.ವೆಚ್ಚದಲ್ಲಿ ಬಸ್ ನಿಲ್ದಾಣದ ಕಾಮಗಾರಿಗೆ ಕಳೆದ ಎರಡೂವರೆ ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಿದ್ದಾರೆ.

ಆದರೆ, ಈಗ ಪಟ್ಟಣ ಪಂಚಾಯತ್‌ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಅದನ್ನು ಬಂದ್ ಮಾಡಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಇಂಜಿನಿಯರ್ ಅವರಿಗೆ ಬಸ್ ನಿಲ್ದಾಣ ಹೇಗೆ ಕಟ್ಟುತ್ತೀರಿ ನೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಭೆಯಲ್ಲಿ ನಾವು (ಬಿಜೆಪಿ ನಾಯಕರು) ಹೇಳುತ್ತೇವೆ, ನಾಲತವಾಡದಲ್ಲಿ ಬಸ್ ನಿಲ್ದಾಣ ಮುಂದೆ ನಿಂತು ಕಟ್ಟಿಸಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ಇದೇ ವೇಳೆ ಆಲೂರಿನ ಕಾಂಗ್ರೆಸ್ ಮುಖಂಡರಿಗೆ ಬಹಿರಂಗ ಆಹ್ವಾನ ನೀಡಿದ ಎಂ.ಎಸ್.ಪಾಟೀಲ, ಅಭಿವೃದ್ಧಿ ಹರಿಕಾರರಾಗಿರುವ ಶಾಸಕ ನಡಹಳ್ಳಿ ಅವರಿಗೆ ಬೆಂಬಲಿಸಿ ನಾಡಗೌಡರನ್ನು ಬಿಡಿ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು.

ಇದನ್ನೂ ಓದಿ:ಮುದ್ದೇಬಿಹಾಳ: ತಬ್ಬಲಿ ಮಕ್ಕಳಿಗೆ ಒಂದು ಲಕ್ಷ ರೂ. ಪರಿಹಾರ ನೀಡಿ ಹೃದಯವಂತಿಕೆ ಮೆರೆದ ನಡಹಳ್ಳಿ

ABOUT THE AUTHOR

...view details