ಕರ್ನಾಟಕ

karnataka

ETV Bharat / state

ವರನಿಗೆ ತಾಳಿ ಕಟ್ಟಿದ ವಧು... ವಿಜಯಪುರ ಜಿಲ್ಲೆಯಲ್ಲೊಂದು ಡಿಫರೆಂಟ್​ ಮದುವೆ! - ತಾಳಿ

ಇಲ್ಲೊಂದು ಮದುವೆಯಲ್ಲಿ ಶುಭ ಗಳಿಗೆ ಸಹ ನೋಡದೇ ವಧು -ವರನಿಗೆ ತಾಳಿಕಟ್ಟಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಮದುವೆ

By

Published : Mar 12, 2019, 2:30 PM IST

ವಿಜಯಪುರ:ಮದುವೆ ಎಂದರೆ ಅಲ್ಲಿ ಸಾಮಾನ್ಯವಾಗಿ ವಧುವಿಗೆ ವರ ತಾಳಿ ಕಟ್ಟುವುದು ಸಂಪ್ರದಾಯ. ಆದರೆ ಇಲ್ಲೊಂದು ಮದುವೆಯಲ್ಲಿ ವಧು -ವರನಿಗೆ ತಾಳಿಕಟ್ಟಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಿಶಿಷ್ಠ ಮದುವೆ ಆಚರಣೆ ನಡೆಯಿತು.ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ವಿಚಿತ್ರ ವಿವಾಹ ನೆರವೇರಿಸಲಾಯಿತು.ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮೀತ್ ಜೊತೆ ಪ್ರಿಯಾ ಮದುವೆ ನಡೆಯಿತು.ಇಬ್ಬರು ವರರಿಗೆ ವಧುಗಳೇ ತಾಳಿ ಕಟ್ಟಿದ್ದು ವಿಶೇಷವಾಗಿತ್ತು.

sdfsd


ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಲಾಯಿತು.ಅಪ್ಪಟ ಬಸವ‌ ಧರ್ಮದ ತತ್ವದ ಅಡಿಯಲ್ಲಿ ಈ ಮದುವೆ ನಡೆಯಿತು.ಇದರ ಜತೆ ಶುಭ ಗಳಿಗೆ ಸಹ ನೋಡದೇ ಮದುವೆ ನಡೆದಿದ್ದು ಮತ್ತೊಂದು ವಿಶೇಷವಾಗಿತ್ತು.ವಧು-ವರರಿಗೆ ಹಿರಿಯರು ಅಕ್ಷತೆ ಬದಲು ಪುಷ್ಪವೃಷ್ಟಿ ಆಶೀರ್ವಾದ ಮಾಡಿದರು.ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನ‌ಸುಧೆ, ವಚನವರ್ಷ ಪುಸ್ತಕಗಳನ್ನು ಸಹ ವಿತರಿಸಲಾಯಿತು.

ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು.ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು‌ ಸೇರಿದಂತೆ ಅನೇಕ‌ ಗಣ್ಯರು ಈ ವಿವಾಹಕ್ಕೆ ಸಾಕ್ಷಿಯಾದರು.


ABOUT THE AUTHOR

...view details