ಕರ್ನಾಟಕ

karnataka

ETV Bharat / state

ವಿದೇಶಿ ಪ್ರಜೆಯಿಂದ ಭಾರತದ ಸಂಸ್ಕೃತಿ ಅಧ್ಯಯನಕ್ಕೆ ಸೈಕಲ್ ಪರ್ಯಟನೆ - kannada top news

ಕೆನಡಾ ದೇಶದ ಪ್ಯಾಟ್ರಿಕ್ ಎಂಬ ವಿದೇಶಿ ಪ್ರಜೆ ಭಾರತದ ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡಲು ಸೈಕಲ್ ಏರಿ ದೇಶ ಪರ್ಯಟನೆ ನಡೆಸುತ್ತಿದ್ದಾರೆ.

bicycle-tour-by-a-foreigner-to-study-the-indian-culture
ವಿದೇಶಿ ಪ್ರಜೆಯಿಂದ ದೇಶದ ಸಂಸ್ಕೃತಿ ಅಧ್ಯಯನಕ್ಕೆ ಸೈಕಲ್ ಪರ್ಯಟನೆ

By

Published : Mar 27, 2023, 5:47 PM IST

ವಿದೇಶಿ ಪ್ರಜೆಯಿಂದ ದೇಶದ ಸಂಸ್ಕೃತಿ ಅಧ್ಯಯನಕ್ಕೆ ಸೈಕಲ್ ಪರ್ಯಟನೆ

ವಿಜಯಪುರ:ಭಾರತ ದೇಶದ ಸಂಸ್ಕೃತಿ, ಧಾರ್ಮಿಕ ಆಚರಣೆ, ಐತಿಹಾಸಿಕ ಹಿನ್ನೆಲೆಯುಳ್ಳ ಸ್ಮಾರಕಗಳಿಗೆ ಮಾರು ಹೋಗದವರೇ ಇಲ್ಲ. ಅದರಲ್ಲಿಯೂ ವಿದೇಶಿಯರು ಭಾರತವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವರು ದೇಶಕ್ಕೆ ಬಂದರೆ ಕೇವಲ ಪ್ರವಾಸಿ ತಾಣಗಳನ್ನು ನೋಡಿ ಹೋಗದೇ ಇಲ್ಲಿನ ತಿಂಡಿಯಿಂದ ಹಿಡಿದು ಇತಿಹಾಸವನ್ನು ಸಹ ಅಧ್ಯಯನ ಮಾಡುತ್ತಾರೆ. ಹಲವು ವಿದೇಶಿಯರು ಇಲ್ಲಿನ ಸಂಸ್ಕೃತಿಗೆ ಮೆಚ್ಚಿ ಭಾರತದಲ್ಲಿ ನೆಲೆ ಕಂಡವರಿದ್ದಾರೆ. ಭಾರತದ ಪ್ರವಾಸಿ ತಾಣಗಳ ಸೌಂದರ್ಯ, ವಿವಿಧ ಹಬ್ಬ ಹರಿ ದಿನಗಳು, ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡಲು ವಿದೇಶಿ ಪ್ರವಾಸಿಗರೊಬ್ಬರು ಸೈಕಲ್ ಮೇಲೆ ದೇಶ ಪರ್ಯಟನೆ ನಡೆಸುತ್ತಿದ್ದಾರೆ.

ಕೆನಡಾ ದೇಶದ ಪ್ಯಾಟ್ರಿಕ್ ಎಂಬ ವಿದೇಶಿ ಪ್ರಜೆ ಕಳೆದ ವರ್ಷ ಅಕ್ಟೋಬರ್ ಅಂತ್ಯದಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದು, ನೇಪಾಳದ ಗಡಿಭಾಗದಿಂದ ಸೈಕಲ್ ಏರಿದ್ದ (ಸೈಕಲ್ ಪರ್ಯಟನೆ) ಇವರು, ಪಶ್ಚಿಮ ಬಂಗಾಳ, ಬಿಹಾರದ ಪಾಟ್ನಾ, ಜಾರ್ಖಂಡ್, ಸೂರತ್, ನಾಗಪುರ, ಮುಂಬೈ, ಪುಣೆ, ಪಂಡರಪುರ ಮೂಲಕ ಭಾನುವಾರ ಐತಿಹಾಸಿಕ ವಿಜಯಪುರ ನಗರಕ್ಕೆ ಆಗಮಿಸಿದ್ದಾರೆ. ಮುಂದೆ ತಮಿಳುನಾಡು ಮೂಲಕ ಕನ್ಯಾಕುಮಾರಿಯ ಕೊತ್ತೂರಂ, ಪುತ್ತಲಂ, ತೆಂತಾಮಾರಿಕುಲಂ ಮೂಲಕ ಕನ್ಯಾಕುಮಾರಿ ಭಾಗದ ಗ್ರಾಮಗಳಲ್ಲಿ ಸೈಕಲ್ ಪರ್ಯಟನೆ ನಡೆಸಲಿದ್ದಾರೆ. ಸದ್ಯ ಸೈಕಲ್ ಮೇಲೆ ಸುಮಾರು 5000 ಕಿ.ಮೀ ಪ್ರಯಾಣ ಬೆಳೆಸಿರುವ ಪ್ಯಾಟ್ರಿಕ್ ಇನ್ನೂ 1500 ಕಿ.ಮೀ ಪ್ರಯಾಣಿಸಬೇಕಿದೆ.

ದೇಶ ಪರ್ಯಟನೆ ಅನುಭವ:ಕೆನಡಾ ದೇಶದ ಪ್ಯಾಟ್ರಿಕ್​ಗೆ ಸದ್ಯ 51ವರ್ಷ ವಯಸ್ಸು ಆಗಿದೆ‌. ಈಗಲೂ ನವ ಯುವಕರಂತೆ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಸದ್ಯ ನಡೆಯುತ್ತಿರುವ ಸೈಕಲ್ ಪರ್ಯಟನೆಯಲ್ಲಿ ನಿತ್ಯ 80 ಕಿಲೋ ಮೀಟರ್ ನಷ್ಟು ದೂರ ಸೈಕಲ್ ತುಳಿದುಕೊಂಡು ಪ್ರಯಾಣಿಸುತ್ತಿದ್ದಾರೆ. ರಾತ್ರಿಯಾದರೆ ದಾರಿಯಲ್ಲಿ ಸಿಗುವ ಲಾಡ್ಜ್​ ಅಥವಾ ಯಾರದಾದರು ಮನೆಯ ಕಟ್ಟೆ ಮೇಲೆ ಮೇಲೆ ರಾತ್ರಿ ವಿಶ್ರಾಂತಿ ಪಡೆಯುತ್ತಾರೆ.

ಇವರು ಹೋಗುವ ರಸ್ತೆ ಮಾರ್ಗದಲ್ಲಿರುವ ವಿಶೇಷತೆಗಳು, ಜಾತ್ರೆ, ಹಬ್ಬ ಹರಿದಿನಗಳ ಆಚರಣೆ ಸೇರಿದಂತೆ ಭಾರತದ ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ಜು ಆಹ್ಲಾದಿಸುತ್ತಾ, ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾರೆ. ಇವರ ಸೈಕಲ್ ದೇಶ ಪರ್ಯಟನೆ ಅನುಭವಗಳು ಸಹ ಸಾಕಷ್ಟು ಆಸಕ್ತಿ ಹೊಂದಿದ್ದು, ಇವರಿಗೆ ಒಳ್ಳೆಯ ಹಾಗೂ ಕೆಟ್ಟ ಅನುಭವಗಳು ಎರಡು ಸಹ ಅಗಿವೆ. ಕೆಲ ಬಾರಿ ಮಲಗಲು ಜಾಗ ಸಿಗದೇ ಪರದಾಡಿದ್ದು ಉಂಟು. ಅದೇ ಕೆಲವು ಗ್ರಾಮಗಳಲ್ಲಿ ಇವರಿಗೆ ರಾಜಾತಿಥ್ಯ ಸಹ ದೊರೆತಿದೆ. ಇಲ್ಲಿನ ಸಂಸ್ಕೃತಿ, ಧಾರ್ಮಿಕ ಆಚರಣೆ ಹಾಗೂ ಐತಿಹಾಸಿಕ ಸ್ಮಾರಕಗಳ ಬಗ್ಗೆ ಪ್ಯಾಟ್ರಿಕ್ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಇನ್ನೂ 1500 ಕಿ.ಮೀಟರ್ ಸೈಕಲ್ ಪರ್ಯಟನೆ ಮುಗಿಸಿ ಇಲ್ಲಿನ ಉತ್ತಮ ಅನುಭವಗಳನ್ನು ಹೊತ್ತುಕೊಂಡು ವಾಪಸ್ ತಮ್ಮ ದೇಶ ಕೆನಡಾಗೆ ಮರಳಲಿದ್ದಾರೆ. ಏನೇ ಆಗಲಿ ಪ್ಯಾಟ್ರಿಕ್ ಅವರ ಮುಂದಿನ ಪ್ರಯಾಣ ಸಹ ಶುಭವಾಗಲಿ ಎಂದು ಹಾರೈಸೋಣ.

ಇದನ್ನೂ ಓದಿ:ತಿಳಿಯದ ಭಾಷೆ.. ಚಾಲಕ ಹಿಂದೆ ಕೂರಿಸಿ ತಾನೇ​ ರಿಕ್ಷಾ ತುಳಿದ ವಿದೇಶಿ ಪ್ರವಾಸಿ

ABOUT THE AUTHOR

...view details