ಶಿರಸಿ: ರಾಮ ರಾಜ್ಯದ ಕಲ್ಪನೆ ಕೊಟ್ಟಿದ್ದು ಆರ್ಎಸ್ಎಸ್, ಬಿಜೆಪಿ, ವಿಶ್ವ ಹಿಂದೂ ಪರಿಷತ್ ಅಲ್ಲ, ಮಹಾತ್ಮ ಗಾಂಧಿಜೀಯವರು. ರಾಮರಾಜ್ಯ ಕಾಂಗ್ರೆಸ್ನ ಅಜೆಂಡಾದಲ್ಲೇ ಇಲ್ಲ. ಆದರೆ ರಾಮರಾಜ್ಯದ ಕಲ್ಪನೆ ಇಟ್ಟು ಕೊಂಡಿದ್ದು ಬಿಜೆಪಿ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬಿಜೆಪಿ ವತಿಯಿಂದ ನಡೆದ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿನಿತ್ಯ ಗಾಂಧೀಜಿಯವರ ತತ್ವಗಳನ್ನ ಹತ್ಯೆ ಮಾಡಿದ್ದು, ಅವಹೇಳನ ಮಾಡಿದ್ದು ಕಾಂಗ್ರೆಸ್. ಮಹಾತ್ಮ ಗಾಂಧಿ, ಅಂಬೇಡ್ಕರ್, ಸಾವರ್ಕರ್ ಹೀಗೆ ದೇಶಕ್ಕೆ ಒಳ್ಳೆಯದನ್ನು ಮಾಡಿದವರನ್ನ ಬದಿಗಿಡುವ ಕೆಲಸ ಮಾಡಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.