ಕರ್ನಾಟಕ

karnataka

ETV Bharat / state

ಶಿರಸಿಯಲ್ಲಿ ಗಮನ ಸೆಳೆದ ಮಲೆನಾಡು ಮೇಳ : ಇಲ್ಲಿ ಮಹಿಳೆಯರದ್ದೇ ಕಾರುಬಾರು - malenada mela

ಶಿರಸಿಯಲ್ಲಿ ಮಲೆನಾಡು ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಬಗೆಬಗೆಯ ಸಸಿಗಳು, ತಿಂಡಿ ತಿನಿಸುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಲ್ಲದೆ ಈ ಮೇಳವನ್ನು ಕಳೆದ 18 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದ್ದು, ಮಹಿಳೆಯರಿಗೆ ಹೊಸ ಹೊಸ ವಸ್ತುಗಳ ಪರಿಚಯದ ವೇದಿಕೆಯಾಗಿ ಈ ಮೇಳ ಪರಿಣಮಿಸಿದೆ.

ಮಲೆನಾಡು ಮೇಳ

By

Published : Jun 25, 2019, 5:42 AM IST

Updated : Jun 25, 2019, 6:03 AM IST

ಶಿರಸಿ: ನನಗೊಂದು ತನಗೊಂದು ಎಂದು ಹೂ ಗಿಡಗಳನ್ನ ಖರೀದಿಸುತ್ತಿರೋ ಮಹಿಳೆಯರು. ಅಷ್ಟೇ ಉತ್ಸಾಹದಿಂದ ತಾವು ತಂದ ಬೀಜ, ಗಡ್ಡೆ-ಗೆಣಸುಗಳನ್ನು ಮಾರುವ ಗೃಹಿಣಿಯರು. ಇನ್ನೊಂದೆಡೆ ಬಗೆ ಬಗೆಯ ತಿಂಡಿ ತಿನಿಸುಗಳು... ಇದೆಲ್ಲ ಕಂಡುಬಂದಿದ್ದು ಶಿರಸಿಯಲ್ಲಿ ನಡೆದ ಮಲೆನಾಡು ಮೇಳದಲ್ಲಿ.

ಕಳೆದ 18 ವರ್ಷಗಳಿಂದ ಇಲ್ಲಿನ ವನಸ್ತ್ರಿ ಮಹಿಳಾ ಸಂಘ ನಡೆಸುತ್ತಿರುವ 'ಮಲೆನಾಡು ಮೇಳ'ವನ್ನು ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿತ್ತು.ಇಲ್ಲಿ ಮನೆ ಅಂಗಳ, ಹಿತ್ತಲಿನಲ್ಲಿ ಬೆಳೆಯಬಹುದಾದ ಅಪರೂಪದ ಹೂವಿನ ಗಿಡಗಳು, ತರಕಾರಿ ಬೀಜಗಳು, ಹಣ್ಣಿನ ಗಿಡಗಳು, ಔಷಧಿ ಗಿಡಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಲ್ಲದೆ ವನಸ್ತ್ರೀ ಸಂಘದ ಸದಸ್ಯರು ಬಿಡುವಿನ ವೇಳೆ ಮನೆಯಲ್ಲೇ ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ಎಲ್ಲವನ್ನೂ ಮೇಳದಲ್ಲಿ ಮಾರಾಟಕ್ಕಿಡಲಾಗಿತ್ತು.

ಶಿರಸಿಯಲ್ಲಿ ಮಲೆನಾಡು ಮೇಳ

ವಸ್ತು ಪ್ರದರ್ಶನದ ಜೊತೆಗೆ ಮೇಳದಲ್ಲಿ ಕಾಡು ಹಣ್ಣುಗಳ ಸಿಹಿ ಹಾಗೂ ಖಾರದ ತಿನಿಸುಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 140ಕ್ಕೂ ಹೆಚ್ಚು ಬಗೆಯ ತಿಂಡಿಗಳನ್ನು ತಯಾರಿಸಿ ಸ್ಪರ್ಧೆಗೆ ಇಡಲಾಗಿತ್ತು. ಇದು ಮಹಿಳೆಯರ ಅಡುಗೆ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಅಲ್ಲದೆ ಈ ಮೇಳವು ಮಹಿಳೆಯರಿಗೆ ವಿಶಿಷ್ಟ ತಿನಿಸುಗಳ ಪರಿಚಯದ ಸಂತೆಯಂತಿತ್ತು.

Last Updated : Jun 25, 2019, 6:03 AM IST

ABOUT THE AUTHOR

...view details