ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ.. ವ್ಯಾಪಾರಿಗಳಿಗೆ ಎಚ್ಚರಿಸಿದ ಪುರಸಭೆ - ಸಾಮಾಜಿಕ ಅಂತರ

ಇಲ್ಲಿನ ಹಳೆ ಮೀನು ಮಾರುಕಟ್ಟೆ ಸಮೀಪದಲ್ಲಿ ರಸ್ತೆಯ ಅಕ್ಕಪಕ್ಕ ಕುಳಿತು ಮೀನು - ತರಕಾರಿ ವ್ಯಾಪಾರ ಮಾಡುವವರ ಬಳಿ ಜನ ಮುಗಿಬಿದ್ದು ವ್ಯವಹಾರ ಮಾಡುತ್ತಿರುವುದನ್ನು ಗಮನಿಸಿದ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಎಲ್ಲರನ್ನೂ ಸ್ಥಳದಿಂದ ಎಬ್ಬಿಸಿ ಬೇರೆಡೆ ತೆರಳುವಂತೆ ಸೂಚಿಸಿದ್ದಾರೆ..

Social Distance violation in Bhatkala
ಭಟ್ಕಳದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ

By

Published : Jul 3, 2020, 8:17 PM IST

ಭಟ್ಕಳ :ತಾಲೂಕಿನಲ್ಲಿ ಈಗಾಗಲೇ ಕೊರೊನಾ ಸೋಂಕಿನಿಂದ ಇಬ್ಬರು ಮೃತ ಪಟ್ಟಿದ್ದಾರೆ. ಆದರೆ, ಸಾಕಷ್ಟು ಜನರಿಗೆ ಇದರ ಭಯವಿಲ್ಲದೆ ಪೇಟೆ ಸೇರಿ ಪ್ರಮುಖ ರಸ್ತೆಯಲ್ಲಿ ಜನಜಂಗುಳಿ ಮಾಡಿಕೊಂಡು ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಇದೀಗ ಇವರನ್ನು ನಿಯಂತ್ರಿಸುವಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ತಲೆನೋವಾಗಿದೆ.

ತಾಲೂಕಿನಲ್ಲಿ ನಡೆದ ಒಂದು ಮದುವೆಯಿಂದಾಗಿ ಕೊರೊನಾ ವೈರಸ್​​ ಬಹುಬೇಗ ತನ್ನ ವ್ಯಾಪ್ತಿ ಹರಡಿದೆ. ಮೃತ ಮದುಮಗನ ಸಂಪರ್ಕ ಮಾಡಿದವರೆಲ್ಲರಲ್ಲಿಯೂ ಪಾಸಿಟಿವ್ ಪ್ರಕರಣ ಬೆಳಕಿಗೆ ಬರುತ್ತಲೇ ಇವೆ. ಆದರೂ ಜನ ರಸ್ತೆಗಿಳಿದು ಗುಂಪು ಗುಂಪಾಗಿ ವ್ಯಾಪಾರ, ವಹಿವಾಟಿನಲ್ಲಿ ತೊಡಗಿಕೊಂಡಿರುವುದು ಆಶ್ಚರ್ಯ.

ಭಟ್ಕಳದಲ್ಲಿ ಸಾಮಾಜಿಕ ಅಂತರ ಮಾಯ..
ಪುರಸಭೆಯಿಂದ ವ್ಯಾಪಾರಿಗಳಿಗೆ ಎಚ್ಚರಿಕೆ:ಲಾಕ್​ಡೌನ್​​ ಸಡಿಲಿಕೆಯಾದ ದಿನದಿಂದಲೂ ಪುರಸಭೆಯ ಆರೋಗ್ಯಾಧಿಕಾರಿಗಳು ಎಲ್ಲಾ ವ್ಯಾಪಾರಸ್ಥರಿಗೆ ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್​​​ ಬಗ್ಗೆ ಸವಿವರವಾಗಿ ತಿಳಿಸುತ್ತಾ ಬಂದಿದ್ದಾರೆ. ಆದರೆ, ವ್ಯಾಪಾರಿಗಳು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೆ ಬೀದಿ ಬದಿ ವ್ಯವಹಾರಕ್ಕೆ ಮುಂದಾಗಿರುವುದರಿಂದ ಇದೀಗ ಪುರಸಭೆ ಆರೋಗ್ಯ ಅಧಿಕಾರಿ ಸುಜೀಯಾ ಸೋಮನ್ ನೇತೃತ್ವದ ತಂಡ ನಿತ್ಯವೂ ಕಾರ್ಯಾಚರಣೆಗಿಳಿದು ಎಚ್ಚರಿಕೆ ನೀಡುತ್ತಿದೆ.

ಮೀನು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ :ಇಲ್ಲಿನ ಹಳೆ ಮೀನು ಮಾರುಕಟ್ಟೆ ಸಮೀಪದಲ್ಲಿ ರಸ್ತೆಯ ಅಕ್ಕಪಕ್ಕ ಕುಳಿತು ಮೀನು - ತರಕಾರಿ ವ್ಯಾಪಾರ ಮಾಡುವವರ ಬಳಿ ಜನ ಮುಗಿಬಿದ್ದು ವ್ಯವಹಾರ ಮಾಡುತ್ತಿರುವುದನ್ನು ಗಮನಿಸಿದ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಎಲ್ಲರನ್ನೂ ಸ್ಥಳದಿಂದ ಎಬ್ಬಿಸಿ ಬೇರೆಡೆ ತೆರಳುವಂತೆ ಸೂಚಿಸಿದ್ದಾರೆ.

ರಿಕ್ಷಾ ಚಾಲಕರಿಗೆ ಪೊಲೀಸರಿಂದ ಸೂಚನೆ :ಲಾಕ್​ಡೌನ್​​ ಸಡಿಲಿಕೆ ಬಳಿಕ ರಸ್ತೆಗಿಳಿದ ತಾಲೂಕಿನ ಸಾವಿರಾರು ಆಟೋ ರಿಕ್ಷಾಗಳು ನಿತ್ಯವೂ ಸಾಕಷ್ಟು ಪ್ರಯಾಣಿಕರನ್ನು ಹೊತ್ತು ಸಾಗುತ್ತಿವೆ. ಈ ಬಗ್ಗೆ ಭಟ್ಕಳ ಪೇಟೆ ಮುಖ್ಯ ರಸ್ತೆಯಲ್ಲಿ ರೌಂಡ್ಸ್​ಗೆ ತೆರಳಿದ ಸಿಪಿಐ ದಿವಾಕರ್, ಯಾರಾದ್ರೂ ತೀವ್ರ ಜ್ವರದಿಂದ ಬಳಲುತ್ತಿದ್ರೆ ಅಂತವರಿಗೆ ಆ್ಯಂಬುಲೆನ್ಸ್​ ಸೇವೆ ಒದಗಿಸಲಾಗುತ್ತಿದೆ. ಎಲ್ಲಾ ಚಾಲಕರು ಮಾಸ್ಕ್​ ಹಾಗೂ ಗ್ಲೌಸ್ ಧರಿಸುವುದರೊಂದಿಗೆ ಸಾಮಾಜಿಕ ಅಂತರದ ಬಗ್ಗೆ ನಿಗಾ ಇಡುವಂತೆ ಸೂಚಿಸಿದ್ದಾರೆ.

ABOUT THE AUTHOR

...view details