ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲಾಕ್ಡೌನ್ನಿಂದ ಬದುಕು ಅತಂತ್ರ: ಪರಿಹಾರಕ್ಕೆ ಬೀದಿ ಬದಿ ವ್ಯಾಪಾರಸ್ಥರು ಒತ್ತಾಯ - road side shoppers appeal to dc
ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ ಬೀದಿ ಬದಿ ವ್ಯಾಪಾರಸ್ಥರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಅವರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಹಲವರು ತರಕಾರಿ, ಹಣ್ಣು ಮಾರಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಆದಾಯ ಬಿಟ್ಟರೆ ಅವರಿಗೆ ಜೀವನ ನಡೆಸಲು ಬೇರೆ ಉದ್ಯೋಗವಿಲ್ಲ. ಆದರೆ, ಕಳೆದ ಮೂರು ತಿಂಗಳಿಂದ ಇವರ ಬದುಕಿನ ಮೇಲೆ ಕೊರೊನಾ ಕಾರ್ಮೋಡ ಕವಿದಿದ್ದರಿಂದ ಜೀವನ ನಡೆಸಲು ಪರದಾಡುತ್ತಿದ್ದಾರೆ. ಸರ್ಕಾರ ವಿವಿಧ ವಲಯಗಳಿಗೆ ಪ್ಯಾಕೇಜ್ ಘೋಷಿಸಿದೆ. ಆದರೆ, ಈ ವಲಯಕ್ಕೆ ಪ್ಯಾಕೇಜ್ ಘೋಷಿಸದೆ ಇರೋದರಿಂದ ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದವರು, ಸಾಲ ತೀರಿಸಲಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಹೀಗಾಗಿ ಸರ್ಕಾರ ಇವರ ನೆರವಿಗೆ ಬರಬೇಕೆಂದು ಆಗ್ರಹಿಸಿ ವ್ಯಾಪಾರಸ್ಥರಾದ ಮಳ್ಳಿ ವೆಂಕಟರಮಣ ನಾಯ್ಕ, ಮಾದೇವಿ ನಾಯ್ಕ, ಇಂದಿರಾ ದೇವೆಂದ್ರ ನಾಯ್ಕ, ಮಾಸ್ತಮ್ಮ ಮಾಸ್ತಪ್ಪ ನಾಯ್ಕ, ಮಾದೇವಿ ನಾಗೇಶ ಮೋಗೇರ ಸೇರಿದಂತೆ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.