ಕರ್ನಾಟಕ

karnataka

ETV Bharat / state

ಬ್ರಿಟೀಷರ ಕ್ರೌರ್ಯ, ದಬ್ಬಾಳಿಕೆಯ ವಿರುದ್ಧ ಆಕ್ರೋಶ: 'ಹಾಲಕ್ಕಿ ಹಗರಣ'ವೆಂಬ ವಿಶೇಷ ಆಚರಣೆ!

ಬ್ರಿಟೀಷರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ವಿಶೇಷ ಆಚರಣೆ 'ಹಾಲಕ್ಕಿ ಹಗರಣ' ಕಾರವಾರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

halakki hagarana an unique awareness show at karawar
halakki hagarana an unique awareness show at karawar

By ETV Bharat Karnataka Team

Published : Dec 24, 2023, 7:09 PM IST

Updated : Dec 25, 2023, 10:45 AM IST

ಹಾಲಕ್ಕಿ ಹಗರಣ ಎಂದರೇನು ಗೊತ್ತೇ?

ಕಾರವಾರ(ಉತ್ತರ ಕನ್ನಡ): ಆಳುವವರನ್ನು ಕಣ್ತೆರೆಸುವ ನಿಟ್ಟಿನಲ್ಲಿ ಬ್ರಿಟೀಷರ ಕಾಲದಿಂದಲೂ ನಡೆಸುತ್ತಿರುವ ಹಾಲಕ್ಕಿ ಸಮುದಾಯದವರ 'ಹಾಲಕ್ಕಿ ಹಗರಣ' ಶನಿವಾರ ಅಮದಳ್ಳಿಯಲ್ಲಿ ನಡೆಯಿತು. ಬೃಹತ್ ಪ್ರಾಣಿಗಳ ಮಾದರಿ, ಬಾವಲಿ, ಮಂಗನ ಕಾಟ ಸೇರಿದಂತೆ ವಿವಿಧ ಮಾದರಿಗಳ ಪ್ರದರ್ಶನ ಸಾವಿರಾರು ಜನರ ಆಕರ್ಷಣೆಗೆ ಕಾರಣವಾಯಿತು.

ಹಾಲಕ್ಕಿ ಹಗರಣ

ಅಮದಳ್ಳಿಯ ನಾರಾಯಣ ದೇವರ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಇದನ್ನು 'ದಿಂಡಿ ಜಾತ್ರೆ' ಎಂದು ಕೂಡ ಕರೆಯಲಾಗುತ್ತದೆ. ಬ್ರಿಟೀಷರ ಕಾಲದಿಂದಲೂ ಹಾಲಕ್ಕಿ ಸಮುದಾಯದವರು ಆಚರಿಸುತ್ತಿರುವ ಈ ಪದ್ಧತಿಯನ್ನು ಇಂದಿಗೂ ಚಾಚು ತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ.

ಹಾಲಕ್ಕಿ ಹಗರಣ

ಬೃಹತ್ ಗಾತ್ರದ ಈ ಪ್ರಾಣಿಗಳ ಮಾದರಿಯನ್ನು ಹೊತ್ತುಕೊಂಡು ಕಾಡುಜನರ ವೇಷಭೂಷಣದಲ್ಲಿ ಬಂದ ಜನರು ನೆರೆದವರನ್ನು ರಂಜಿಸಿದರು. ಇದಲ್ಲದೆ ಸಿಂಹದ ರೂಪದ ಬಾಲದಲ್ಲಿಯೂ ತಲೆಯಿರುವ ಪ್ರಾಣಿಯ ಮಾದರಿ, ಬಾವಲಿ, ವಿವಿಧ ಬೃಹತ್ ಪ್ರಾಣಿಗಳು ಜನಮೆಚ್ಚುಗೆಗೆ ಪಾತ್ರವಾದವು. ಅಲ್ಲದೇ, ತೋಳ, ವಿವಿಧ ದೇವರ ಮಾದರಿಗಳನ್ನೂ ಸಹ ಪ್ರದರ್ಶಿಸಲಾಯಿತು.

ಹಾಲಕ್ಕಿ ಹಗರಣ

ಉದ್ದೇಶವೇನು?: ಬ್ರಿಟೀಷರ ಕ್ರೌರ್ಯ, ದಬ್ಬಾಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಭಾಷೆ ಬಾರದ ಹಾಲಕ್ಕಿ ಸಮುದಾಯದವರು ಈ ರೀತಿಯ ಅಣಕು ಪ್ರದರ್ಶನಗಳನ್ನು ಮಾಡುತ್ತಾ, ಖಂಡಿಸಿ ಕಿವಿ ಹಿಂಡುತ್ತಿದ್ದರಂತೆ. ಅಂದಿನಿಂದಲೂ ಈ ಸಮುದಾಯದವರು ಹಗರಣವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ಆಧರಿಸಿ ಇದೀಗ ಸ್ಥಳೀಯ ಯುವಕರು ಇವುಗಳನ್ನು ಮನರಂಜನೆಯಾಗಿಯೂ ವಿವಿಧ ಮಾದರಿಗಳನ್ನು ಸಿದ್ದಪಡಿಸುತ್ತಿದ್ದಾರೆ.

ಹಾಲಕ್ಕಿ ಹಗರಣ

"ಕೇವಲ ಹಾಲಕ್ಕಿ ಸಮುದಾಯದವರು ಮಾತ್ರವಲ್ಲದೇ ಎಲ್ಲಾ ಸಮುದಾಯದ ಯುವಕರೂ ಸೇರಿ ಒಗ್ಗಟ್ಟಾಗಿ ಊರ ಹಬ್ಬವಾಗಿ ಆಚರಣೆ ಮಾಡುತ್ತಾರೆ. ಈ ಪ್ರದರ್ಶನ ನೋಡುವುದಕ್ಕಾಗಿಯೇ ಜಿಲ್ಲೆಯ ವಿವಿಧ ಭಾಗಗಳಿಂದ, ಗೋವಾ, ಮಹಾರಾಷ್ಟ್ರದಿಂದಲೂ ಜನ ಬರುತ್ತಾರೆ" ಎಂದು ಪುರುಷೋತ್ತಮ ಗೌಡ ಎಂಬವರು ತಿಳಿಸಿದರು.

ಹಾಲಕ್ಕಿ ಹಗರಣ

ಗಂಟೆ ಪ್ರದರ್ಶನಕ್ಕೆ ತಿಂಗಳ ಶ್ರಮ:"ನಮ್ಮ ಪೂರ್ವಜರು ಬ್ರಿಟೀಷರ ಕಾಲದಿಂದಲೂ ಜಾತ್ರಾ ಮಹೋತ್ಸವದ ವೇಳೆ ಆಚರಿಸಿಕೊಂಡು ಬರುತ್ತಿದ್ದ ಅಣಕು ಪ್ರದರ್ಶನವನ್ನು ನಾವೆಲ್ಲರೂ ಮುಂದುವರಿಸುತ್ತಿದ್ದೇವೆ. ಇದು ಕೇವಲ ಒಂದು ಗಂಟೆಯ ಪ್ರದರ್ಶನವಾದರೂ ಯುವಕರು ತಿಂಗಳಿಗೂ ಹೆಚ್ಚು ಕಾಲ ಬಿಡುವಿನ ಸಮಯದಲ್ಲಿ ಮಾದರಿ ತಯಾರಿಸುತ್ತಾರೆ. ಇಷ್ಟೊಂದು ದೊಡ್ಡ ಮಟ್ಟದ ಉತ್ಸವವಾದರೂ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಹಣಕಾಸು ಸಹಕಾರ ಕೊಡುವುದಿಲ್ಲ. ಊರಿನ ಯುವಕರೇ ತಾವು ಕೂಡಿಟ್ಟ ಹಣ ಬಳಸುತ್ತಾರೆ" ಎಂದು ಸ್ಥಳೀಯರಾದ ನರೇಂದ್ರ ತಳೇಕರ್ ಮಾಹಿತಿ ನೀಡಿದರು.

ಹಾಲಕ್ಕಿ ಹಗರಣ

ಇದನ್ನೂ ಓದಿ:ಕಾಂತರಾಜು ಆಯೋಗದ ವರದಿ ಒಪ್ಪಿಕೊಳ್ಳದೆ ವೈಜ್ಞಾನಿಕ ಜಾತಿ ಜನಗಣತಿ ಮಾಡಿ: ವೀರಶೈವ-ಲಿಂಗಾಯತ ಮಹಾಸಭಾ ನಿರ್ಣಯ

Last Updated : Dec 25, 2023, 10:45 AM IST

ABOUT THE AUTHOR

...view details