ಕರ್ನಾಟಕ

karnataka

ETV Bharat / state

ಭಟ್ಕಳದ ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವಕ್ಕೆ ಸಾಕ್ಷಿಯಾದ್ರು ಭಕ್ತಗಣ

ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ದೇವರ ಪಲ್ಲಕ್ಕಿ ಉತ್ಸವ ಶನಿವಾರ ನಗರದಾದ್ಯಂತ ಅದ್ಧೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾದರು.

By

Published : Feb 2, 2020, 3:11 PM IST

Updated : Feb 2, 2020, 4:15 PM IST

god-venkataramana-pallakki-celebration
ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವ

ಭಟ್ಕಳ: ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಶನಿವಾರ ನಗರದಾದ್ಯಂತ ಸಾವಿರಾರು ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾದ್ರು.

ಪಲ್ಲಕ್ಕಿ ಮಹೋತ್ಸವದಲ್ಲಿ ಶಾಸಕ ಸುನೀಲ್​ ನಾಯ್ಕ ಸೇರಿದಂತೆ ನಾಮಧಾರಿ ಸಮಾಜದ 5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ದೇವರಿಗೆ ತುಲಾಭಾರ ಸಮರ್ಪಣೆ ಮಾಡಲಾಯಿತು.

ಭಟ್ಕಳದ ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವ

ಸಂಜೆ 5 ಗಂಟೆಯಿಂದ ವೆಂಕಟೇಶ್ವರ ದೇವರ ಪಲ್ಲಕ್ಕಿಯು ಸಹಸ್ರಕ್ಕೂ ಅಧಿಕ ಭಕ್ತರ ಜಯಘೋಷದಲ್ಲಿ ನಗರದಾದ್ಯಂತ ಸಂಚರಿಸಿದ್ದು ಮಧ್ಯ ರಾತ್ರಿ 2 ಗಂಟೆಯ ತನಕ ಉತ್ಸವ ಜರುಗಿತು.

ಪಲ್ಲಕ್ಕಿ ಉತ್ಸವದ ಬಳಿಕ ಮಧ್ಯರಾತ್ರಿ 2 ಗಂಟೆಗೆ ಮಹಾ ಮಂಗಳಾರತಿ, ವೇದಾದಿ ಶಾತ್ತುಮೊರೈ ಹಾಗೂ ತೀರ್ಥ ಪ್ರಸಾದ ನೀಡುವ ಮೂಲಕ ಪಲ್ಲಕ್ಕಿ ಮಹೋತ್ಸವ ಸಂಪನ್ನಗೊಂಡಿತು.

Last Updated : Feb 2, 2020, 4:15 PM IST

ABOUT THE AUTHOR

...view details