ಶಿರಸಿ: ಹೇಳದೇ ಕೇಳದೇ ಹಣ ಖರ್ಚು ಮಾಡಬೇಡ, ಹಣದ ಅವಶ್ಯಕತೆ ಇದ್ದಲ್ಲಿ ಕೇಳು ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹನುಮಂತಿಯಲ್ಲಿ ನಡೆದಿದೆ.
ಹಣವನ್ನು ವ್ಯರ್ಥವಾಗಿ ಖರ್ಚು ಮಾಡಬೇಡ ಎಂದಿದ್ದೇ ತಪ್ಪಾಯ್ತಾ: ಯವತಿ ಆತ್ಮಹತ್ಯೆ
ಮನೆಯಲ್ಲಿದ್ದ 50 ಸಾವಿರ ಹಣದಲ್ಲಿ 20 ಸಾವಿರ ರೂ.ಗಳನ್ನು ಯಾರಿಗೂ ಹೇಳದೇ ಈಕೆ ಖರ್ಚು ಮಾಡಿದ್ದಳಂತೆ. ಇದಕ್ಕೆ ಮನೆಯವರು ಬುದ್ಧಿವಾದ ಹೇಳಿದ್ದಾರೆ. ಅಗತ್ಯವಿದ್ದಲ್ಲಿ ಕೇಳಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡ ಯುವತಿ ದುಡುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ
ಹನುಮಂತಿಯ ಸರಸ್ವತಿ ಈರುಗೌಡ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯಲ್ಲಿದ್ದ 50 ಸಾವಿರ ಹಣದಲ್ಲಿ 20 ಸಾವಿರ ರೂ.ಗಳನ್ನು ಯಾರಿಗೂ ಹೇಳದೇ ಈಕೆ ಖರ್ಚು ಮಾಡಿದ್ದಳಂತೆ. ಇದಕ್ಕೆ ಮನೆಯವರು ಬುದ್ಧಿವಾದ ಹೇಳಿದ್ದಾರೆ. ಅಗತ್ಯವಿದ್ದಲ್ಲಿ ಕೇಳಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡ ಯುವತಿ ದುಡುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಯುವತಿಯ ತಾಯಿ ಘಟನೆ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.