ಕಾರವಾರ:ಭಾರೀ ಮಳೆಗೆ ನೆರೆಯಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿದ್ದ ಜನರಿಗೆ ಆಹಾರ, ಔಷಧ ಸೇರಿದಂತೆ ಇನ್ನಿತರ ಸಾಮಗ್ರಿಯನ್ನು ನೌಕಾನೆಲೆಯ ಹೆಲಿಕಾಪ್ಟರ್ ಮೂಲಕ ಇಂದು ತಲುಪಿಸಲಾಯಿತು.
ನೆರೆಯಲ್ಲಿ ಸಿಲುಕಿಕೊಂಡು ಹೊರಬರಲಾಗದೆ ಇದ್ದ ಅಂಕೋಲಾ ತಾಲೂಕಿನ ರಾಮನಗುಳಿ, ಕಲ್ಲೇಶ್ವರ, ಡೊಂಗ್ರಿ, ಹೆಗ್ಗರಣಿ, ಕೈಗಣಿ ಗ್ರಾಮಗಳಿಗೆ ನೌಕಾನೆಲೆಯ ಎಎಲ್ಹೆಚ್ ಹೆಲಿಕಾಪ್ಟರ್ ಮೂಲಕ ಕೊಂಡೊಯ್ಯಲಾಗಿತ್ತು. 225 ಕೆಜಿ ಪಡಿತರ, ಔಷಧಿಗಳನ್ನು ಹಗ್ಗದ ಮೂಲಕ ಮತ್ತು ಕೆಲ ಭಾಗಗಳಲ್ಲಿ ಮೇಲಿಂದ ಎಸೆಯುವ ಮೂಲಕ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಹೆಲಿಕಾಪ್ಟರ್ ಮೂಲಕ ಆಹಾರ, ಔಷಧ ಪೂರೈಕೆ ಆದರೆ ನಿನ್ನೆ ಇದೇ ರೀತಿ ಹೆಲಿಕಾಪ್ಟರ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಪ್ರಯತ್ನಿಸಲಾಗಿತ್ತಾದರೂ ಹವಾಮಾನ ವೈಪರಿತ್ಯದಿಂದ ಸಾಧ್ಯವಾಗಿರಲಿಲ್ಲ. ಆದರೆ ಇಂದು ಹವಾಮಾನ ವೈಪರಿತ್ಯದ ನಡುವೆಯೂ ಎತ್ತರದ ಬೆಟ್ಟಗಳ ನಡುವಿನ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿ ಅಗತ್ಯ ವಸ್ತುಗಳನ್ನು ಪೂರೈಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಮೂಲಕ ಆಹಾರ, ಔಷಧ ಪೂರೈಕೆ ಇನ್ನು ಕರ್ನಾಟಕ ನೌಕಾನೆಲೆ ಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ನೆರೆಹಾವಳಿಯಿಂದ ತೊಂದರೆಗೊಳಗಾದ ಮಲ್ಲಾಪುರ ಗ್ರಾಮ ಪಂಚಾಯತಿ ಬಳಿ ತೆರಳಿ ಅಧಿಕಾರಿಗಳು ಹಾಗೂ ತಮ್ಮ ಪರಿಹಾರ ಕಾರ್ಯನಿರತ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಕಳೆದ ಒಂದು ವಾರದಿಂದ ನೌಕಾನೆಲೆ ಸಿಬ್ಬಂದಿ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.