ಕಾರವಾರ: ಹೊನ್ನಾವರ - ಕಾಸರಗೋಡು ಟೊಂಕ ಬಳಿ ಖಾಸಗಿ ಬಂದರು ನಿರ್ಮಾಣಕ್ಕೆ ಗುಂಡಾಗಳನ್ನು ಬಿಟ್ಟು ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಎಂದು ಮಾಜಿ ಶಾಸಕ ಮಂಕಾಳ್ ವೈದ್ಯ ಆರೋಪಿಸಿದ್ದಾರೆ.
ಗೂಂಡಾಗಳ ಮೂಲಕ ಮೀನುಗಾರರನ್ನು ಒಕ್ಕಲೆಬಿಸುತ್ತಿದ್ದಾರೆ: ಮಾಜಿ ಶಾಸಕ ಮಂಕಾಳ್ ವೈದ್ಯ
ಕಾಮಗಾರಿಗೆ ಸರ್ಕಾರದಿಂದ ಯಾವುದೇ ಹಣ ಮಂಜೂರಾಗಿಲ್ಲ, ಈ ಪ್ರದೇಶದ ಸರ್ವೆ ನಡೆಸಿಲ್ಲ. ಎಷ್ಟು ಮನೆ, ಗುಡಿಸಲು, ಮರಗಳು ಹೋಗುತ್ತವೆ ಎಂಬುದರ ಸಮೀಕ್ಷೆ ನಡೆಸಿಲ್ಲ. ಆದರೆ, ಇದೀಗ ಏಕಾಏಕಿ ಪೊಲೀಸರು ಹಾಗೂ ಕೆಲವು ಗೂಂಡಾಗಳ ಮೂಲಕ ಮೀನುಗಾರರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಮಂಕಾಳ್ ವೈದ್ಯ ಆರೋಪಿಸಿದ್ದಾರೆ.
ಮಾಜಿ ಶಾಸಕ ಮಂಕಾಳ್ ವೈದ್ಯ
ಕಾಮಗಾರಿಗೆ ಸರ್ಕಾರದಿಂದ ಯಾವುದೇ ಹಣ ಮಂಜೂರಾಗಿಲ್ಲ, ಈ ಪ್ರದೇಶದ ಸರ್ವೆಯನ್ನೂ ನಡೆಸಿಲ್ಲ. ಎಷ್ಟು ಮನೆ, ಗುಡಿಸಲು, ಮರಗಳು ಹೋಗುತ್ತವೆ ಎಂಬುದರ ಸಮೀಕ್ಷೆ ನಡೆಸಿಲ್ಲ. ಆದರೆ, ಇದೀಗ ಏಕಾಏಕಿ ಪೊಲೀಸರು ಹಾಗೂ ಕೆಲವು ಗೂಂಡಾಗಳ ಮೂಲಕ ಮೀನುಗಾರರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಮೀನುಗಾರರ ನೆರವಿಗೆ ಬರಬೇಕಿದ್ದ ಹಾಲಿ ಶಾಸಕರು ಕಂಪನಿಯಲ್ಲಿ ತಮ್ಮವರಿಗೆ ಗುತ್ತಿಗೆ ಕೊಡಿಸಿ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.