ಕರ್ನಾಟಕ

karnataka

ETV Bharat / state

ವರದಾ ನದಿಗೆ ಬಾಗಿನ ಸಲ್ಲಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷೆ

ಮೈದುಂಬಿ ಹರಿಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳಲ್ಲಿ ಒಂದಾದ ಬನವಾಸಿಯ ವರದಾ ನದಿಗೆ ಶಿರಸಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಬಾಗಿನ ಸಲ್ಲಿಸಿದರು.

ವರದಾ ನದಿಗೆ ಬಾಗೀನ ಸಲ್ಲಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷೆ

By

Published : Aug 12, 2019, 4:01 AM IST

ಶಿರಸಿ: ಮೈದುಂಬಿ ಹರಿಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳಲ್ಲಿ ಒಂದಾದ ಬನವಾಸಿಯ ವರದಾ ನದಿಗೆ ಶಿರಸಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಬಾಗಿನ ಸಲ್ಲಿಸಿದರು.

ವರದಾ ನದಿಗೆ ಬಾಗಿನ ಸಲ್ಲಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷೆ

ಹಲವು ವರ್ಷಗಳ ಬಳಿಕ ವರದಾ ನದಿ ಈ ರೀತಿ ತುಂಬಿ ಹರಿಯುತ್ತಿದ್ದು, ನಾಡಿಗೆ ಸಮೃದ್ಧಿ ತರಲೆಂದು ಬೇಡಿಕೊಂಡು ಬನವಾಸಿಯ ಭಾಶಿ ಬ್ರೀಡ್ಜ್​ ಬಳಿ ಮೊರದಲ್ಲಿ ಮಂಗಳ ದ್ರವ್ಯ, ಅರಿಶಿನ ಕುಂಕುಮ, ಹೂವು, ಕಾಡಿಗೆ, ಕನ್ನಡಿ ಸೇರಿದಂತೆ ಇನ್ನಿತರ ಬಾಗಿನ ಸಾಮಾನುಗಳನ್ನು ಇರಿಸಿ ನದಿಗೆ ಸಮರ್ಪಿಸಲಾಯಿತು.

ಸಾಮಾನ್ಯವಾಗಿ ಪ್ರತಿ ವರ್ಷವೂ ಯಲ್ಲಾಪುರ ವಿಧಾನಸಭಾ ಶಾಸಕರು ಬಾಗಿನ ನೀಡುವ ಪದ್ದತಿಯಿದ್ದು, ಮಾಜಿ ಶಾಸಕ ಶಿವರಾಮ್ ಹೆಬ್ಬಾರ್ ಅನರ್ಹಗೊಂಡಿರುವ ಹಿನ್ನೆಲೆ ಶಿರಸಿ ತಾಲೂಕ್​ ಪಂಚಾಯತ್​ ಅಧ್ಯಕ್ಷರು ನದಿಗೆ ಬಾಗಿನ ಅರ್ಪಿಸಿದರು.

ABOUT THE AUTHOR

...view details