ಕರ್ನಾಟಕ

karnataka

ETV Bharat / state

ಕಾರವಾರದ ಲಂಡನ್​ ಬ್ರಿಡ್ಜ್​ ಬಳಿ ಚರಂಡಿಗೆ ಬಿದ್ದ ಕಾರು: ಇಬ್ಬರು ಸಾವು! - car accident in karawara

ಅಂಕೋಲಾದಿಂದ ಗೋವಾ ಕಡೆ ತೆರಳುತ್ತಿದ್ದ ಕಾರೊಂದು ನಿನ್ನೆ ತಡರಾತ್ರಿ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರನ್ನು ಸ್ಥಳೀಯರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

car accident in karawara : 2 died, 2 injured
ಕಾರವಾರದ ಲಂಡನ್​ ಬ್ರಿಡ್ಜ್​ ಬಳಿ ಚರಂಡಿಗೆ ಬಿದ್ದ ಕಾರು: ಇಬ್ಬರು ಸಾವು!

By

Published : Nov 3, 2020, 9:51 AM IST

Updated : Nov 3, 2020, 10:11 AM IST

ಕಾರವಾರ: ತಡರಾತ್ರಿ ನಿಯಂತ್ರಣ ತಪ್ಪಿ ಕಾರೊಂದು ಚರಂಡಿಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಗರದ ಲಂಡನ್ ಬ್ರಿಡ್ಜ್ ಬಳಿ ಸಂಭವಿಸಿದೆ.

ಲಂಡನ್​ ಬ್ರಿಡ್ಜ್​ ಬಳಿ ಚರಂಡಿಗೆ ಬಿದ್ದ ಕಾರು

ಚಿಕ್ಕಮಗಳೂರು ಮೂಲದ ಕಿರಣ್(28) ಹಾಗೂ ರಾಕೇಶ್ ಸಿ. ಆರ್(28) ಮೃತಪಟ್ಟವರು. ಗಾಯಗೊಂಡಿದ್ದ ಮತ್ತಿಬ್ಬರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾದಿಂದ ಗೋವಾ ಕಡೆ ತೆರಳುತ್ತಿದ್ದವರು ಲಂಡನ್ ಬ್ರಿಡ್ಜ್ ಬಳಿಯ ಪೆಟ್ರೋಲ್ ಬಂಕ್​ಗೆ ತೆರಳಿ ಮರಳಿ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ.

ಕಾರು ಎದೆಮಟ್ಟದ ನೀರಿನಲ್ಲಿ ಮುಳುಗಿದ ಪರಿಣಾಮ ಮೇಲೆ ಬರಲಾಗದೆ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಇನ್ನಿಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸದ್ಯ ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 3, 2020, 10:11 AM IST

ABOUT THE AUTHOR

...view details