ಕರ್ನಾಟಕ

karnataka

ಉತ್ತರಕನ್ನಡದಲ್ಲಿ ಇಂದು 21 ಕೊರೊನಾ ಸೋಂಕಿತರು ಪತ್ತೆ

ಒಟ್ಟು ಸೋಂಕಿತರ ಸಂಖ್ಯೆ 354ಕ್ಕೆ ಏರಿಕೆಯಾಗಿದೆ. 159 ಮಂದಿ ಗುಣಮುಖರಾಗಿದ್ದಾರೆ. 194 ಮಂದಿಗೆ ಚಿಕಿತ್ಸೆ ಮುಂದುವರಿದಿದೆ..

By

Published : Jul 5, 2020, 7:25 PM IST

Published : Jul 5, 2020, 7:25 PM IST

21 Coronas infected today in Uttara Kannada
ಉತ್ತರ ಕನ್ನಡದಲ್ಲಿ ಇಂದು 21 ಕೊರೊನಾ ಸೋಂಕಿತರು ಪತ್ತೆ

ಕಾರವಾರ: ಜಿಲ್ಲೆಯಲ್ಲಿ ಇಂದು 21 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 6 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ ಭಟ್ಕಳದಲ್ಲಿಯೇ 9 ಸೋಂಕಿತರಿದ್ದು, 13 ವರ್ಷದ ಬಾಲಕ, 21, 23, 25, 26 ವರ್ಷದ ಯುವಕರು, 52 ವರ್ಷದ ಪುರುಷ ಹಾಗೂ 19, 22 ವರ್ಷದ ಯುವತಿಯರು ಹಾಗೂ 78 ವರ್ಷದ ವೃದ್ಧೆಗೆ ಸೋಂಕು ತಗುಲಿದೆ. ಅದರಲ್ಲಿ ಓರ್ವ ಕೇರಳದಿಂದ ಬಂದಿದ್ರೆ, ಉಳಿದವರಿಗೆ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ ಬಂದಿದೆ.

ಕುಮಟಾದ 32 ವರ್ಷದ ಪುರುಷ, 26 ವರ್ಷದ ಯುವತಿ ಹಾಗೂ 29 ವರ್ಷದ ಮಹಿಳೆ, ಮುಂಡಗೋಡದ 44 ವರ್ಷದ ಪುರುಷ, 21 ವರ್ಷದ ಯುವಕ, 22 ವರ್ಷದ ಯುವತಿ, ಹಳಿಯಾಳದ 25 ವರ್ಷದ ಯುವತಿ, 32 ವರ್ಷದ ಮಹಿಳೆ, 50 ವರ್ಷದ ಪುರುಷ, ಕಾರವಾರದ 49 ವರ್ಷದ ಮಹಿಳೆ, 62 ವರ್ಷದ ಪುರುಷ, ಯಲ್ಲಾಪುರದ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಕಾರವಾರ, ಕುಮಟಾ, ಯಲ್ಲಾಪುರ, ಮುಂಡಗೋಡ ಹಾಗೂ ಹಳಿಯಾಳದ ಸೋಂಕಿತರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.

ಕಾರವಾರದ ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ ಕೋವಿಡ್-19 ವಾರ್ಡ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿ ಗುಣಮುಖರಾಗಿದ್ದಾರೆ. ಅದರಲ್ಲಿ 5 ವರ್ಷದ ಗಂಡು ಮಗು, 3 ಪುರುಷರು ಹಾಗೂ ಇಬ್ಬರು ಮಹಿಳೆಯರಾಗಿದ್ದಾರೆ. ದಾವಣಗೆರೆ ಮೂಲದ ಓರ್ವ ಯುವಕ ಇದ್ದು, ಹೊನ್ನಾವರದ ಇಬ್ಬರು, ಭಟ್ಕಳ, ಮುಂಡಗೋಡ ಹಾಗೂ ಹಳಿಯಾಳದ ತಲಾ ಒಬ್ಬರು ಗುಣಮುಖರಾಗಿದ್ದಾರೆ.

ಇದರೊಂದಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 354ಕ್ಕೆ ಏರಿಕೆಯಾಗಿದೆ. 159 ಮಂದಿ ಗುಣಮುಖರಾಗಿದ್ದಾರೆ. ಮಂಗಳೂರಿನ ಮೃತಪಟ್ಟ ವೃದ್ಧ ಸೇರಿ 2 ಸಾವಾಗಿದ್ದು, 194 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details