ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಕಟ್ಟುನಿಟ್ಟಿನ ಲಾಕ್ಡೌನ್ ಇರಲಿದ್ದು, ಸರ್ಕಾರದ ಆದೇಶವನ್ನು ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲಿಸಲಿದೆ. ಜಿಲ್ಲೆಯ ಜನತೆ ಕೂಡಾ ಇದಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮನವಿ ಮಾಡಿದ್ದಾರೆ.
ಕಟ್ಟುನಿಟ್ಟಿನ ಲಾಕ್ಡೌನ್ಗೆ ಸಹಕರಿಸಿ: ಉಡುಪಿ ಡಿಸಿ ಮನವಿ
ಸರ್ಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಲಾಗುತ್ತಿದ್ದು, ಜಿಲ್ಲೆಯ ಜನ ಸಹಕರಿಸಬೇಕು ಮತ್ತು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಜಿ ಜಗದೀಶ್
ಭಾನುವಾರ ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ ಇದೆ. ಮೆಡಿಕಲ್, ಕ್ಲಿನಿಕ್, ಆಸ್ಪತ್ರೆ ತೆರೆದಿರುತ್ತವೆ. ಪೇಪರ್, ಹಾಲು ಮಾರಾಟಕ್ಕೆ ಅವಕಾಶ ಇದೆ. ಅನಗತ್ಯವಾಗಿ ಓಡಾಡಿದರೆ ವಾಹನ ಮುಟ್ಟುಗೋಲು ಹಾಕುತ್ತೇವೆ. ಸರ್ಕಾರದ ಸೂಚನೆಯಂತೆ ಪೂರ್ವನಿಗದಿತ ಮದುವೆಯನ್ನು ತಹಶೀಲ್ದಾರರ ಅನುಮತಿ ಪಡೆದು ಐವತ್ತು ಜನ ಭಾಗವಹಿಸಲು ಅವಕಾಶ ಇದೆ ಎಂದರು.