ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ವರುಣನ ಅಬ್ಬರ,‌ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಣೆ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಬರುವ ವಾರಾಹಿ ಅಣೆಕಟ್ಟು ಭರ್ತಿಯಾಗಿದೆ. ನೀರಿನ ಒಳ ಹರಿವು ಇದೇ ರೀತಿ ಮುಂದುವರೆದರೆ ಅಣೆಕಟ್ಟಿಗೆ ಅಪಾಯವಾಗುವ ಸಾಧ್ಯತೆ ಇದ್ದು, ನೀರು ಬಿಡಲು ಕರ್ನಾಟಕ ವಿದ್ಯುತ್ ನಿಗಮ ಮುಂದಾಗಿದೆ.

By

Published : Aug 5, 2020, 10:48 PM IST

Red and Orange Alert Declared in Udupi
ಉಡುಪಿಯಲ್ಲಿ ವರುಣನ ಅಬ್ಬರ,‌ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಆಗಸ್ಟ್ 6, 9 ಹಾಗೂ 10ರಂದು ರೆಡ್ ಅಲರ್ಟ್, 7 ಹಾಗೂ 8 ರಂದು ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ‌ 5 ದಿನಗಳ ಕಾಲ ಭಾರೀ ‌ಮಳೆಯಾಗುವ ಎಚ್ಚರಿಕೆಯನ್ನು ವಿಪತ್ತು ನಿರ್ವಹಣಾ ‌ಪ್ರಾಧಿಕಾರ ನೀಡಿದ್ದು, ಭಾರಿ ಮಳೆಯಿಂದಾಗಿ ವಾರಾಹಿ ನದಿ ಉಕ್ಕಿಹರಿಯುತ್ತಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಬರುವ ವಾರಾಹಿ ಅಣೆಕಟ್ಟು ಭರ್ತಿಯಾಗಿದೆ. ನೀರಿನ ಒಳ ಹರಿವು ಇದೇ ರೀತಿ ಮುಂದುವರೆದರೆ ಅಣೆಕಟ್ಟಿಗೆ ಅಪಾಯವಾಗುವ ಸಾಧ್ಯತೆ ಇದ್ದು, ನೀರು ಬಿಡಲು ಕರ್ನಾಟಕ ವಿದ್ಯುತ್ ನಿಗಮ ಮುಂದಾಗಿದೆ. 563.88 ಮೀಟರ್ ನೀರಿನ ಸಂಗ್ರಹ ಸಾಮರ್ಥ್ಯದ ಅಣೆಕಟ್ಟಿನಲ್ಲಿ 563.6 ಮೀಟರ್ ನಷ್ಟು ನೀರಿನ ಮಟ್ಟ ಭರ್ತಿಯಾಗಿದೆ.

ಅಣೆಕಟ್ಟು ನೀರನ್ನು ಯಾವುದೇ ಸಂದರ್ಭದಲ್ಲಿ ಹೊರಬಿಡುವ ಸಾಧ್ಯತೆ ಇದ್ದು, ವಾರಾಹಿ ನದಿ ಪಾತ್ರದಲ್ಲಿರುವ ಅವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಲಾಡಿ ನದಿ ಪಾತ್ರದಲ್ಲಿ ಕೃತಕ ನೆರೆಯಾಗುವ ಸಾಧ್ಯತೆ ಇದ್ದು ಜನ-ಜಾನುವಾರುಗಳ ಜೊತೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸೂಚನೆ ನೀಡಲಾಗಿದೆ.

ABOUT THE AUTHOR

...view details