ಕರ್ನಾಟಕ

karnataka

ETV Bharat / state

ಪೇಟೆಂಟ್​ ಪಡೆದ ಮಟ್ಟುಗುಳ್ಳ ತರಕಾರಿ ಬೆಳೆ ಪಿನಾಕಿನಿ ನದಿ ನೀರಿನಿಂದ ನಾಶ!

ಬೇಸಿಗೆಯಲ್ಲಿ ಬೆಳೆಯುವ ತರಕಾರಿ ಬೆಳೆಗೆ ನೀರು ಬೇಕು. ನೀರಿಲ್ಲದೇ ಬೇಸಿಯಲ್ಲಿ ತರಕಾರಿ ಬೆಳೆ ಅಸಾಧ್ಯ. ಆದ್ರೆ ಈ ಭಾಗದಲ್ಲಿ ತರಕಾರಿ ಕೃಷಿಗೆ, ನೀರೇ ಶಾಪವಾಗಿ ಪರಿಣಮಿಸಿದೆ.

By

Published : Apr 10, 2021, 11:48 PM IST

decaying-and-destroying-the-vegetable-soil-that-is-to-be-exported-to-a-foreign-country
ರೈತ ಕಂಗಾಲು

ಉಡುಪಿ:ಅದು ಪೇಟೆಂಟ್‌ ಪಡೆದ ಕರಾವಳಿಯ ಏಕ ಮಾತ್ರ ತರಕಾರಿ. ದೇಶ ಮಾತ್ರವಲ್ಲದೇ ವಿದೇಶದಲ್ಲೂ ಘಮ ಘಮಿಸಿದ ಈ ಬೆಳೆಗೆ ಉಪ್ಪು ನೀರು ಶಾಪವಾಗಿ ಪರಿಣಮಿಸಿದೆ. ಹೊರ ದೇಶಕ್ಕೆ ರಫ್ತು ಆಗಬೇಕಿದ್ದ ತರಕಾರಿ, ಗಿಡ ಸಹಿತ ಮಣ್ಣಲ್ಲಿ ಕೊಳೆತು ನಾಶವಾಗಿದ್ದು, ಇದನ್ನೇ ನಂಬಿದ ರೈತ ಕುಟುಂಬ ಆತಂಕಕ್ಕೆ ಒಳಗಾಗಿದೆ.

ಜಿಲ್ಲೆಯ ಹೊರವಲಯದ ಮಟ್ಟು ಪ್ರದೇಶದಲ್ಲಿ ಬೆಳೆಯುವ 'ಮಟ್ಟುಗುಳ್ಳ ಪೇಟೆಂಟ್' ಪಡೆದ ತರಕಾರಿಗೆ ಕರಾವಳಿ ಮಾತ್ರವಲ್ಲದೆ ದೇಶ-ವಿದೇಶದಲ್ಲಿ ವಿಶೇಷ ಬೇಡಿಕೆ ಇದೆ. ಆದರೆ ಈಗ ಮಟ್ಟುಗುಳ್ಳದ ಗಿಡಗಳು ಕೊಳೆತು ಹೋಗುತ್ತಿವೆ. ಹೀಗಾಗಲು ಮುಖ್ಯ ಕಾರಣ ಪಕ್ಕದಲ್ಲೇ ಹರಿಯುವ ಪೀನಾಕಿನಿ ನದಿಯ ಉಪ್ಪು ನೀರು. ಈ ನದಿಯ ಉಪ್ಪು ನೀರು ಒಳಹರಿದು, ಗುಳ್ಳ ಬೆಳದ ಪ್ರದೇಶಗಳಿಗೆ ನುಗ್ಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಮಟ್ಟುಗುಳ್ಳ ತರಕಾರಿ ಬೆಳೆ ಪಿನಾಕಿನಿ ನದಿ ನೀರಿನಿಂದ ನಾಶ

ಉಡುಪಿಯಲ್ಲಿ ಸುರಿದ ಭಾರಿ ಮಳೆಗೆ ಕೆಲ ತಿಂಗಳುಗಳ ಹಿಂದೆ, ಗುಳ್ಳದ ಗಿಡಗಳು ಕೊಳೆತು ಹೋಗಿತ್ತು. ನಂತರ ರೈತರು ಕಷ್ಟ ಪಟ್ಟು, ಮತ್ತೆ ಗುಳ್ಳ ಕೃಷಿ ಮಾಡಿದರು. ಆದರೆ, ಉಪ್ಪು ನೀರು ನುಗ್ಗಿದ ಪರಿಣಾಮ, ಇನ್ನೇನು ಕೊಯ್ಲ ಮಾಡಿ ಮಾರುಕಟ್ಟೆ ಸಾಗಾಟ ಆಗಬೇಕಿದ್ದ ಮಟ್ಟುಗುಳ್ಳ ಸರ್ವನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಈ ಸಮಸ್ಯೆ ಕಳೆದ ಹಲವು ವರ್ಷಗಳಿಂದಲೂ ಜೀವಂತವಾಗಿದ್ದು, ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದೆ. ಪಿನಾಕಿನಿ ನದಿಗೆ ಶಾಶ್ವತ ತಡೆಗೋಡೆ ನಿರ್ಮಿಸಿ, ನದಿಯ ಮಧ್ಯದಲ್ಲಿ ಇರುವ ಕುದ್ರು ಜಾಗ ತೆರವುಗೊಳಿಸಿದ್ರೆ ಸಮಸ್ಯೆ ಪರಿಹಾರವಾಗುತ್ತೆ. ಆದರೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಒಲವು ತೋರಿಸುತ್ತಿಲ್ಲ ಎಂಬುದು ರೈತನ ಅಳಲು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ಕರಾವಳಿಯ ವಿಶೇಷ ತರಕಾರಿ ಬೆಳೆ, ಈ ರೀತಿ ಉಪ್ಪು ನೀರಿನಿಂದ ಕೊಳೆಯುತ್ತಿರುವುದು ಬೇಸರದ ಸಂಗತಿ. ಇನ್ನದಾರು ಸರ್ಕಾರ ಎಚ್ಚೆತ್ತು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ABOUT THE AUTHOR

...view details