ಕರ್ನಾಟಕ

karnataka

ETV Bharat / state

ಪ್ರಧಾನಿ‌ ಮೋದಿಗೆ ಪೇಜಾವರ ಶ್ರೀ ಪತ್ರ : ರಾಜ್ಯಕ್ಕೆ ಶೀಘ್ರ ಪರಿಹಾರಧನ ಬಿಡುಗಡೆಗೆ ನಿವೇದನೆ - ಪ್ರಧಾನಿ ಮೋದಿ

ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳು ರಾಜ್ಯಕ್ಕೆ ಶೀಘ್ರ ಪರಿಹಾರಧನ ಬಿಡುಗಡೆ ಮಾಡುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಮೋದಿ-ಪೇಜಾವರ ಶ್ರೀ

By

Published : Oct 5, 2019, 7:41 AM IST

ಉಡುಪಿ:ರಾಷ್ಟ್ರ ಮತ್ತು ವಿಶ್ವದ ನಾಯಕರಾಗಿ ತಾವು ಮಾಡುತ್ತಿರುವ ಕೆಲಸದಿಂದ ಸಂತುಷ್ಟಿಯಾಗಿದೆ. ಜನಕಲ್ಯಾಣ ಯೋಜನೆ, ಕಾಶ್ಮೀರ ವಿಚಾರ, ಆರ್ಥಿಕ ಯೋಜನೆಗಳ ಬಗ್ಗೆ ನಮಗೆ ಹೆಮ್ಮೆಯೂ ಇದೆ. ನಿಮ್ಮ ಕೆಲಸಗಳಿಂದ ತಾವು ಭಾರತೀಯರ ಪ್ರೀತಿಗಳಿಸಿದ್ದೀರಿ. ನಿಮ್ಮ ನೇತೃತ್ವದಲ್ಲಿ ಭಾರತದ ಸಮಗ್ರ ಅಭಿವೃದ್ದಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಪೇಜಾವರ ಶ್ರೀ ಮೋದಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದಾರೆ. ಲಕ್ಷಾಂತರ ಜನರ ಮನೆಗಳು ನಾಶವಾಗಿದೆ. ಜನರು ನಿಮ್ಮ ನೆರವಿಗಾಗಿ ಆಸೆಗಣ್ಣಿನಿಂದ ನಿರೀಕ್ಷಿಸುತ್ತಿದ್ದಾರೆ ನಾವೂ ಕೂಡಾ ತಾವು ಪರಿಹಾರ ಘೋಷಿಸುವುದನ್ನು ಕಾಯುತ್ತಿದ್ದೇವೆ. ಕರ್ನಾಟಕಕ್ಕೆ ಅತೀ ಶೀಘ್ರ ಆರ್ಥಿಕ ಸಹಾಯ ಘೊಷಿಸುವಿರಿ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಪರಿಹಾರ ಕೊಟ್ಟರೆ ಕರ್ನಾಟಕದ ಜನರಲ್ಲಿ ತಮ್ಮ ಬಗ್ಗೆ ಪ್ರೀತಿ, ಗೌರವ ಹೆಚ್ಚುತ್ತೆ. ಮಹಾರಾಷ್ಟ್ರ, ಗುಜರಾತ್, ಬಿಹಾರದ ಪ್ರವಾಹ ಪೀಡಿತ ಜನರಿಗೂ ಪರಿಹಾರ ಘೋಷಿಸಿ. ಶೀಘ್ರ ಪರಿಹಾರ ಘೋಷಣೆಗೆ ನಾನು ಮನವಿ ಮಾಡುತ್ತೇನೆ. ಎಲ್ಲವನ್ನೂ ತಾವು ಅರಿತಿದ್ದೀರಿ... ಎಂದು ಶ್ರೀಗಳು ನಮೋಗೆ ಪತ್ರ ಬರೆದಿದ್ದಾರೆ.

ABOUT THE AUTHOR

...view details