ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಚಾಲಕ ಪಾರು, ಬೆಂಕಿ ಉಪಯೋಗಿಸದಂತೆ ಮುನ್ಸೂಚನೆ - kannadanews

ಉಡುಪಿ ಜಿಲ್ಲೆಯ ಬಲಾಯಿಪಾದೆ ಎಂಬಲ್ಲಿ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗ್ಯಾಸ್​ ಸೋರಿಕೆಯಾಗಿಲ್ಲ ಎಂಬುದು ದೃಢಪಟ್ಟಿದೆಯಾದರೂ ಬೆಂಕಿ ಉಪಯೋಗಿಸದಂತೆ ಸುತ್ತಮುತ್ತಲಿನವರಿಗೆ ಎಚ್ಚರಿಕೆ ನೀಡಲಾಗಿದೆ.

ಗ್ಯಾಸ್ ಟ್ಯಾಂಕರ್ ಪಲ್ಟಿ ಚಾಲಕ ಪಾರು

By

Published : Jul 3, 2019, 9:03 AM IST

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಯಾದ ಘಟನೆ ಇಂದು ಬೆಳಗಿನ‌ ಜಾವ ಉಡುಪಿಯ ಬಲಾಯಿಪಾದೆ ಎಂಬಲ್ಲಿ ನಡೆದಿದೆ.

ಗ್ಯಾಸ್ ಟ್ಯಾಂಕರ್ ಪಲ್ಟಿ ಚಾಲಕ ಪಾರು

ಈ ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು,ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ಗ್ಯಾಸ್ ಸೋರಿಕೆ ಇಲ್ಲವೆಂದು ದೃಢಪಡಿಸಿದ ಅಗ್ನಿಶಾಮಕ ದಳ , ಟ್ಯಾಂಕರ್ ಮೇಲೆತ್ತುವ ತನಕ ಸಾರ್ವಜನಿಕರು ಟ್ಯಾಂಕರ್ ದೂರವಿರಲು ಸೂಚಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿರುವ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದು, ಮೊಬೈಲ್ ಬಳಸದಂತೆ, ಸುತ್ತಮುತ್ತ ಬೆಂಕಿ ಹಚ್ಚದಂತೆ ತಿಳಿಸಿದ್ದಾರೆ.

ABOUT THE AUTHOR

...view details