ಕರ್ನಾಟಕ

karnataka

ETV Bharat / state

ಹಳ್ಳಿಗಳಲ್ಲೇ ಕೋವಿಡ್​ ಸಾವಿನ ಪ್ರಮಾಣ ಹೆಚ್ಚಳ, ಸ್ವಯಂ ಚಿಕಿತ್ಸೆ ಬೇಡ.. ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಜಿಲ್ಲೆಯಲ್ಲಿ ಕಂಡು ಬಂದ ಮೊದಲ ಮತ್ತು 2ನೇ ಅಲೆಯಲ್ಲಿ ಹೆಚ್ಚಾಗಿ ಗ್ರಾಮಾಂತರ ಪ್ರದೇಶದಲ್ಲಿಯೇ ಸಾವುಗಳಾಗಿದ್ದು, 208 ಜನ ಮೃತಪಟ್ಟಿದ್ದಾರೆ..

By

Published : May 21, 2021, 10:41 PM IST

Dr. Sudheer Chandrachuda
ಡಾ. ಸುಧೀರ್ ಚಂದ್ರಚೂಡ

ಉಡುಪಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಬ್ಬರದ ಪಾಸಿಟಿವಿಟಿ ರೇಟ್ 40.83ರಷ್ಟು ತಲುಪಿದೆ ಎಂಬ ಆತಂಕಕಾರಿ ಅಂಶವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರಚೂಡ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮೊದಲ ಮತ್ತು 2ನೇ ಅಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿಯೇ ಹೆಚ್ಚು ಸಾವುಗಳಾಗಿದ್ದು, 208 ಜನ ಮೃತಪಟ್ಟಿದ್ದಾರೆ. ಅಲ್ಲದೇ, ಪಟ್ಟಣದಲ್ಲಿ 64 ಜನ ಬಲಿಯಾಗಿದ್ದಾರೆ ಎಂದರು.

ಕೊರೊನಾ ಬಗ್ಗೆ ಹಳ್ಳಿಯ ಜನ ಕೂಡಲೇ ಎಚ್ಚೆತ್ತುಕೊಳ್ಳಬೇಕು, ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಡಬೇಕು. ರೋಗಲಕ್ಷಣವನ್ನು ಯಾವುದೇ ಕಾರಣಕ್ಕೂ ಅಸಡ್ಡೆ ಮಾಡಬೇಡಿ.

ಸ್ವಯಂ ಚಿಕಿತ್ಸೆ ಮಾಡೋದನ್ನು ಬಿಟ್ಟು ಬಿಡಿ. ಆಸ್ಪತ್ರೆಯ ಚಿಕಿತ್ಸೆ ಬಗ್ಗೆ ನಿಮಗೆ ಯಾವುದೇ ಆತಂಕ ಸಂಶಯ ಬೇಡ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ. ಆರೋಗ್ಯ ಗಂಭೀರವಾಗುವ ತನಕ ಕಾಯುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರಚೂಡ ಮಾತನಾಡಿದರು

ಓದಿ:ಲಾಕ್‌ಡೌನ್ 3.O ಜಾರಿ: ಎರಡು ವಾರಗಳ ವಿಸ್ತರಿತ ಲಾಕ್‌ಡೌನ್​​​ನ ಮಾರ್ಗಸೂಚಿ ಪ್ರಕಟ

ABOUT THE AUTHOR

...view details