ಕರ್ನಾಟಕ

karnataka

ಬೀಡಾಡಿ ಗೋವು ಕದಿಯುತ್ತಿದ್ದ ಖದೀಮರು: ಓರ್ವ ಅರೆಸ್ಟ್, ಮೂವರು ಎಸ್ಕೇಪ್​

ಕಂಡ್ಲೂರು ನಿವಾಸಿ ಮುಜಾಫರ್ ಅಹಮ್ಮದ್ (24) ಬಂಧಿತ ಆರೋಪಿ. ಸದಾಫ್, ವಾಯಿದ್, ಸಿಯಾನ್ ಪರಾರಿಯಾಗಿದ್ದಾರೆ.

By

Published : Apr 4, 2021, 11:00 PM IST

Published : Apr 4, 2021, 11:00 PM IST

cattle theft case of udupi: one arrested
ಜಾನುವಾರುಗಳನ್ನು ಕದ್ದೊಯ್ಯುತ್ತಿದ್ದ ತಂಡದ ಓರ್ವ ಆರೋಪಿ ಅರೆಸ್ಟ್ - ಮೂವರು ಪರಾರಿ

ಉಡುಪಿ: ಬೀಡಾಡಿ ಗೋವುಗಳನ್ನು ಕದ್ದೊಯ್ಯುತ್ತಿದ್ದ ತಂಡದ ಓರ್ವ ಆರೋಪಿಯನ್ನು ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.

ಕಂಡ್ಲೂರು ನಿವಾಸಿ ಮುಜಾಫರ್ ಅಹಮ್ಮದ್ (24) ಬಂಧಿತ ಆರೋಪಿ. ಸದಾಫ್, ವಾಯಿದ್, ಸಿಯಾನ್ ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್​ ಬೆನ್ನತ್ತಿದ್ದರು. ಈ‌ ನಡುವೆ ಸಿಪಿಐ ಅವರು ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ನಾಕಾಬಂದಿ ಹಾಕಿಸಿದ್ದರು.

ಜಾನುವಾರು‌ ಕದ್ದು ಅತಿ ವೇಗವಾಗಿ ಕಾರು ನಿಯಂತ್ರಣ ತಪ್ಪಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೊವಾಡಿ ಕ್ರಾಸ್ ಬಳಿ ರಸ್ತೆ ಬದಿಯ ಡಿವೈಡರ್​​ಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಮೂವರು ಪರಾರಿಯಾಗಿದ್ದು, ಮುಜಾಫರ್​ ಎಂಬಾತ ಸಿಕ್ಕಿಬಿದ್ದಿದ್ದಾನೆ.

ಓರ್ವ ಆರೋಪಿ ಅರೆಸ್ಟ್ - ಜಾನುವಾರು ರಕ್ಷಣೆ

ಇದನ್ನೂ ಓದಿ:ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಅಂದ್ರೆ ಅದು ಬೈದಂಗಾ: ಸಿದ್ದರಾಮಯ್ಯ ಪ್ರಶ್ನೆ

ತಾವು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಜಾನುವಾರು ಕದ್ದು ಸಾಗಿಸುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾ‌ನೆ ಎನ್ನಲಾಗ್ತಿದೆ. ಇವರು ಬ್ರೆಡ್ ಪೀಸ್ ಹಾಕಿ‌ ಜಾನುವಾರು ಕಳವು ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದು ಎರಡು‌ ಜಾನುವಾರನ್ನು ರಕ್ಷಿಸಲಾಗಿದೆ.

ABOUT THE AUTHOR

...view details