ಮಂಗಳೂರು: ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಗೆ ಉಡುಪಿಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಅವರನ್ನು ಕೆಪಿಸಿಸಿ ಸಂಯೋಜಕರನ್ನಾಗಿ ನೇಮಿಸಲಾಗಿದೆ.
ಭಾರತ್ ಜೋಡೊ ಯಾತ್ರೆ ಸಂಯೋಜಕರಾಗಿ ಉಡುಪಿಯ ಆಚಾರ್ಯ ನೇಮಕ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ 3,570 ಕಿ.ಮೀ ಉದ್ದದ 'ಭಾರತ್ ಜೋಡೋ ಯಾತ್ರೆ' ಸೆಪ್ಟೆಂಬರ್ 10 ರಂದು ಸಂಜೆ ಕೇರಳ ಪ್ರವೇಶಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಶಿಫಾರಸಿನ ಮೇರೆಗೆ ಅವರನ್ನು ಆಯ್ಕೆ ಮಾಡಲಾಗಿದೆ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆಯ್ಕೆ ಮಾಡಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ 3,570 ಕಿ.ಮೀ ಉದ್ದದ 'ಭಾರತ್ ಜೋಡೋ ಯಾತ್ರೆ' ಸೆಪ್ಟೆಂಬರ್ 10 ರಂದು ಸಂಜೆ ಕೇರಳ ಪ್ರವೇಶಿಸಿತು ಮತ್ತು 450 ಕಿಲೋಮೀಟರ್ ದೂರ ಕ್ರಮಿಸುವುದರ ಮೂಲಕ 19 ದಿನಗಳಲ್ಲಿ ಏಳು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಅಕ್ಟೋಬರ್ 1 ರಂದು ಯಾತ್ರೆಯು ಕರ್ನಾಟಕಕ್ಕೆ ಆಗಮಿಸಲಿದೆ.