ಉಡುಪಿ: ನಗರದ ಡಿಸಿಐಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಉತ್ತರಪ್ರದೇಶ ರಿಜಿಸ್ಟ್ರೇಶನ್ ಲಾರಿಯಲ್ಲಿ ಕರಾವಳಿಗೆ ಬರುತ್ತಿದ್ದ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಬಳಿ ಡಿಸಿಐಬಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರಪ್ರದೇಶ ರಿಜಿಸ್ಟ್ರೇಷನ್ ಲಾರಿ ಬಂದಿದೆ. ಕಂಟೇನರ್ ಲಾರಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಬಿದಿರಿನ ಕೋಲುಗಳು ಸಿಕ್ಕಿವೆ. ಕಂಟೈನರ್ನಲ್ಲಿ ಬಿದಿರಾ ಅಂತ ಸಂಶಯಗೊಂಡ ಪೊಲೀಸರು ಚಾಲಕ ಮತ್ತು ನಿರ್ವಾಹಕರ ವಿಚಾರಣೆ ನಡೆಸಿದಾಗ ಇಬ್ಬರೂ ತಬ್ಬಿಬ್ಬಾಗಿದ್ದಾರೆ.
ಕಂಟೇನರ್ನಲ್ಲಿ 49 ಕೆಜಿ ಗಾಂಜಾ ಪತ್ತೆ: ಇಬ್ಬರ ಬಂಧನ ಕಂಟೇನರ್ ಅನ್ನು ಓಪನ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ಬಿದಿರು ಕೋಲುಗಳನ್ನು ಓಪನ್ ಮಾಡಿ ನೋಡಿದಾಗ ಗಾಂಜಾದ ಪ್ಯಾಕೆಟ್ಗಳು ಸಿಕ್ಕಿವೆ. ಕಂಟೇನರ್ನಲ್ಲಿ 49 ಕೆ.ಜಿ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ಲಾರಿ ಚಾಲಕ, ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಟೇನರ್ ಸೀಜ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಗಾಂಜಾ ವಹಿವಾಟು ನಡೆಯುತ್ತದೆ ಎಂಬುದು ಜಗಜ್ಜಾಹೀರು. ಗಾಂಜಾ ವ್ಯಾಪಾರಿಗಳು ಕೂಡ ಈ ಭಾಗದ ಯುವಕರನ್ನು ಗಾಂಜಾ ಗಿರಾಕಿಗಳಾಗಿ ಪರಿವರ್ತಿಸಿದ್ದು, ಸರ್ಕಾರ ಮತ್ತು ಪೊಲೀಸರ ನಿದ್ದೆಗೆಡಿಸಿದೆ. ಒಂದು ಕಾರ್ಯಾಚರಣೆಯಲ್ಲಿ ಸಿಕ್ಕಿದ್ದು ಇಷ್ಟು. ತಪಾಸಣೆ ಇಲ್ಲದಿದ್ದಾಗ, ಕಾರ್ಯಾಚರಣೆ ನಡೆಸದಿದ್ದಾಗ ಸಾಗಾಟವಾದದ್ದು ಎಷ್ಟು ಎಂಬುದು ಎಲ್ಲರ ಪ್ರಶ್ನೆ.