ಕರ್ನಾಟಕ

karnataka

ದಲಿತನೆಂಬ ಕಾರಣಕ್ಕೆ ಸಂಸದ ಎನ್.ನಾರಾಯಣಸ್ವಾಮಿ ಗೊಲ್ಲರಹಟ್ಟಿ ಪ್ರವೇಶಕ್ಕೆ ತಡೆ.. ವರದಿ ಕೇಳಿದ ಡಿಸಿ

ಚಿತ್ರದುರ್ಗ ಲೋಕಸಭಾ ಸದಸ್ಯ ಎನ್. ನಾರಾಯಣಸ್ವಾಮಿ ಪರಿಶೀಲನೆಗೆಂದು ಗೊಲ್ಲರಹಟ್ಟಿಗೆ ತೆರಳಿದ ವೇಳೆ ಅಲ್ಲಿಯ ಜನರು ಇವರ ಪ್ರವೇಶ ನಿರಾಕರಿಸಿದ್ದು, ಈ ಕುರಿತು ವರದಿ ನೀಡುವಂತೆ ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ.

By

Published : Sep 17, 2019, 10:28 AM IST

Published : Sep 17, 2019, 10:28 AM IST

Updated : Sep 17, 2019, 12:56 PM IST

ಪ್ರವೇಷ ನಿರಾಕರಣೆ

ತುಮಕೂರು: ಚಿತ್ರದುರ್ಗ ಲೋಕಸಭಾ ಸದಸ್ಯ ಎನ್. ನಾರಾಯಣಸ್ವಾಮಿಯವರನ್ನು ಗೊಲ್ಲರಹಟ್ಟಿಯೊಳಗೆ ಪ್ರವೇಶಿಸಲು ನಿರಾಕರಿಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಈ ಕುರಿತಂತೆ ವರದಿ ನೀಡುವಂತೆ ಸೂಚನೆ ನೀಡಿರುವುದಾಗಿ ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ 'ಈಟಿವಿ ಭಾರತ್'ಕ್ಕೆ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಪಷ್ಟವಾದ ಮಾಹಿತಿಗಾಗಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ನೀಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಈ ಒಂದು ಘಟನೆಗೆ ಸಂಬಂಧಪಟ್ಟಂತೆ ಈವರೆಗೂ ಚಿತ್ರದುರ್ಗ ಸಂಸದ ಎನ್. ನಾರಾಯಣಸ್ವಾಮಿ ಯಾವುದೇ ರೀತಿಯ ಪತ್ರ ಬರೆದಿಲ್ಲ.ಈ ಘಟನೆ ಕುರಿತಂತೆ ತಿಳಿಯಲು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ವರದಿ ನೀಡುವಂತೆ ಸೂಚಿಸಿದ್ದು, ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.

ಅದೇ ರೀತಿ ಪಾವಗಡ ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಮತ್ತು ಉಪ ವಿಭಾಗಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

Last Updated : Sep 17, 2019, 12:56 PM IST

ABOUT THE AUTHOR

...view details