ತುಮಕೂರು:ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಲು ರಾಹುಲ್ ಗಾಂಧಿಯವರೇ ಸೂಚಿಸಿದ್ದು. ಹಾಗಾಗಿ ನಾವು ಅವರನ್ನು ಗೆಲ್ಲಿಸಿಕೊಂಡು ಬರಬೇಕಿದೆ ಎಂದು ಟಿ.ಬಿ.ಜಯಚಂದ್ರ ಹೇಳಿದರು.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಜಿಎಂಆರ್ ಕಲ್ಯಾಣ ಮಂಟಪದಲ್ಲಿ ನಡೆದ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ರೂ ಅದು ರಾಹುಲ್ ಗಾಂಧಿ ಕೈ ಬಲಪಡಿಸಲು. ನಾವು ಹಾಕುವ ಒಂದೊಂದು ಮತವೂ ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡಲು ಅನುಕೂಲವಾಗಲಿದೆ ಎಂದರು.
ತುಮಕೂರಿನಿಂದ ಸ್ಪರ್ಧಿಸಲು ದೇವೇಗೌಡರಿಗೆ ಸೂಚಿಸಿದ್ದು ರಾಹುಲ್ ಗಾಂಧಿ ಬಿಜೆಪಿಯವರು ಸಂವಿಧಾನ ಬದಲು ಮಾಡಲು ಬಂದಿದ್ದೇವೆ ಅನ್ನುತ್ತಾರೆ. ಆದರೆ ಅದನ್ನು ವಿರೋಧಿಸಿ ಪ್ರಧಾನಿ ಒಂದೂ ಮಾತೂ ಆಡಿಲ್ಲ. ಅದರ ಹಿಂದೆ ಹಿಡನ್ ಅಜೆಂಡಾ ಇದೆ. ಯುಪಿಎ ಕಾಲದಲ್ಲಿ ಹಲವು ಏರ್ಸ್ಟ್ರೈಕ್ ಮಾಡಿದ್ದೇವೆ. ಆದರೆ ಯಾವತ್ತೂ ಆ ಸಾಧನೆಯನ್ನು ಚುನಾವಣೆಗೆ ಉಪಯೋಗಿಸಿಕೊಂಡಿಲ್ಲ ಎಂದರು.
ಹೇಮಾವತಿ ನೀರು ತುಮಕೂರಿಗೆ ಬರಲು ದೇವೇಗೌಡರೇ ಕಾರಣರಾಗಿದ್ದಾರೆ. ಈಗ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಯಾರು ಪ್ರಧಾನಿ ಆಗ್ತಾರೆ ಅನ್ನೋದು ಗೊತ್ತಿಲ್ಲ. ಆದರೆ ಯಾರೇ ಆದರೂ ಮೋದಿ ಮಾತ್ರ ಪ್ರಧಾನಿ ಆಗಬಾರದು ಎಂದು ಹೇಳಿದರು.