ಕರ್ನಾಟಕ

karnataka

ಶುದ್ಧ ನೀರಿನ ಘಟಕಗಳ ಪರಿಶೀಲನೆ: ಮಾಜಿ ಕಾರ್ಪೊರೇಟರ್ ಪುತ್ರನ ಚಳಿ ಬಿಡಿಸಿದ ಆಯುಕ್ತ

ಶುದ್ಧ ಕುಡಿಯುವ ನೀರಿನ ಘಟಕಗಳ ಪರಿಶೀಲನೆಗೆ ಅಡ್ಡಿಪಡಿಸಲು ಯತ್ನಿಸಿದ ಮಾಜಿ ಕಾರ್ಪೊರೇಟ್ ಪುತ್ರನಿಗೆ ಮಹಾನಗರ ಪಾಲಿಕೆ ಆಯುಕ್ತರು ಕಿವಿ ಹಿಂಡಿದ್ದಾರೆ.

By

Published : May 9, 2019, 1:44 PM IST

Published : May 9, 2019, 1:44 PM IST

ಮಹಾನಗರ ‌ಪಾಲಿಕೆ ಆಯುಕ್ತ

ತುಮಕೂರು: ಸರಿಯಾಗಿ ಕಾರ್ಯನಿರ್ವಹಿಸದ ಶುದ್ದ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆಯುವ ವೇಳೆ ಪ್ರಶ್ನಿಸಲು ಮುಂದಾದ ಮಾಜಿಕಾರ್ಪೋರೇಟರ್ ಪುತ್ರನನ್ನು ತುಮಕೂರು ಮಹಾನಗರ ‌ಪಾಲಿಕೆ ಆಯುಕ್ತ ಭೂಬಾಲನ್‌ ತೀವ್ರ ತರಾಟೆಗೆ ತೆಗೆದುಕೊಂಡರು.

ಕಾರ್ಪೊರೇಟರ್ ಪುತ್ರ ಹಾಗು ಮಹಾನಗರ ‌ಪಾಲಿಕೆ ಆಯುಕ್ತರ ನಡುವಿನ ವಾಗ್ವಾದ

ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಘಟಕಗಳನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ನೀರಿನ ಘಟಕಗಳನ್ನು ವಶಕ್ಕೆ ಪಡೆಯಲು ಪಾಲಿಕೆ ಅಧಿಕಾರಿಗಳು ಮುಂದಾದ್ರು. ಈ ವೇಳೆ24ನೇ ವಾರ್ಡ್​ನ ನೀರಿನ ಘಟಕದ ನಿರ್ವಹಣೆಯ ಉಸ್ತುವಾರಿವಹಿಸಿರುವ ವಸೀಂಖಾನ್ ಶೇರಾನಿ ಎಂಬುವರು 'ನಾನು ಮಾಜಿ ಕಾರ್ಪೋರೇಟರ್ ಮಗ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೋಪಗೊಂಡಪಾಲಿಕೆ ಆಯುಕ್ತ ಭೂಬಾಲನ್‌ 'ಏನಿವಾಗ ಮಾಜಿ ಕಾರ್ಪೋರೇಟರ್ ಮಗ ಅಂದ್ರೆ ಕೊಂಬಿದಿಯಾ' ಎಂದು ಚಳಿ ಬಿಡಿಸಿದರು.

For All Latest Updates

TAGGED:

ABOUT THE AUTHOR

...view details