ತುಮಕೂರು: ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ಜೋಷಿ, ಯಶವಂತ್ ಸಿನ್ಹಾ ಇವರನ್ನೆಲ್ಲ ಮೊದಲು ಪಕ್ಷಕ್ಕಾಗಿ ಉಪಯೋಗಿಸಿಕೊಂಡು ನಂತರ ನಿರ್ಲಕ್ಷ್ಯಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಯಡಿಯೂರಪ್ಪ ಅವರನ್ನು ಬಿಜೆಪಿಯವರು ಏನ್ ಮಾಡಿದ್ದಾರೆ ಅನ್ನೋದನ್ನ ಜನರೇ ಕೇಳಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸಾಕಷ್ಟು ಹೋರಾಟದಿಂದ ಬಂದಿದ್ದಾರೆ. ಅವರನ್ನ ಕೆಳಗಿಳಿಸಿದ್ದು, ಬಿಜೆಪಿಯ ಆಂತರಿಕ ವಿಚಾರ. ಮೋದಿ, ಶಾ ಹಿರಿಯರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎನ್ನುವುದನ್ನ ರಾಜ್ಯದ ಜನ ನೋಡಿದ್ದಾರೆ ಎಂದರು.