ತುಮಕೂರು:ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪ ರಾಜಕೀಯ ದ್ವೇಷದ ಹಿನ್ನೆಲೆ ನನ್ನ ಮಗನ ಮೇಲೆ ಹಲ್ಲೆ ನಡೆಸಲು ತಮ್ಮ ಹಿಂಬಾಲಕರನ್ನು ಬಿಟ್ಟಿದ್ದಾರೆ ಎಂದು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಆರೋಪಿಸಿದ್ದಾರೆ.
ನನ್ನ ಮಗನ ಮೇಲಿನ ಹಲ್ಲೆಗೆ ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪ ಕಾರಣ: ಶಾಸಕ ಮಸಾಲೆ ಜಯರಾಮ್ ಆರೋಪ - ಬಿಜೆಪಿ ಶಾಸಕ ಮಸಾಲೆ ಜಯರಾಮ್ ಮಗನ ಮೇಲೆ ಹಲ್ಲೆ
ನನ್ನ ಮಗನ ಮೇಲಿನ ಹಲ್ಲೆಗೆ ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪ ಕಾರಣ, ಅವರ ಹಿಂಬಾಲಕರು ಈ ಹಲ್ಲೆ ಮಾಡಿದ್ದಾರೆ ಎಂದು ಶಾಸಕ ಮಸಾಲೆ ಜಯರಾಮ್ ಗಂಭೀರವಾಗಿ ಆರೋಪಿಸಿದ್ದಾರೆ.
ಶಾಸಕ ಮಸಾಲೆ ಜಯರಾಮ್ ಆಕ್ರೋಶ
ಮಸಾಲೆ ಜಯರಾಮ್ ಮಗ ತೇಜು ಜಯರಾಮ್ ಮೇಲೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಕುರಿತಂತೆ ಸಿಎಸ್ ಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಶಾಸಕ ಮಸಾಲೆ ಜಯರಾಮ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪ ಈ ಘಟನೆಗೆ ನೇರ ಕಾರಣ. ಆತ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ಅವರ ಮೇಲೆ ದೂರು ದಾಖಲಾಗಿದೆ. ಕೃಷ್ಣಪ್ಪರ ಇಂತಹ ಕೃತ್ಯಗಳನ್ನು ಜನ ಸಹಿಸೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.