ಕರ್ನಾಟಕ

karnataka

ETV Bharat / state

ತುಮಕೂರು: ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ - ಪೊಲೀಸ್ ಠಾಣೆ

ನಿಶ್ಚಿತಾರ್ಥದ ಉಂಗುರ ಕಳೆದುಹೋಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಲ್ಲಿ ನಡೆದಿದೆ.

commits suicide
ಆತ್ಮಹತ್ಯೆ

By ETV Bharat Karnataka Team

Published : Nov 22, 2023, 8:14 PM IST

ತುಮಕೂರು:ನಿಶ್ಚಿತಾರ್ಥದ ಉಂಗುರ ಕಳೆದೊಯ್ತು ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದು ಯುವಕನೊಬ್ಬನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದ ದೇವರಾಯಪಟ್ಟಣದಲ್ಲಿ ನಡೆದಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕಮಲೇಶ್ (36) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ನಿಶ್ಚಿತಾರ್ಥ ಉಂಗುರ:ಮೂರು ತಿಂಗಳ ಹಿಂದೆ ಬೆಂಗಳೂರು ಮೂಲದ ಯುವತಿಯೊಂದಿಗೆ ಯುವಕನ ವಿವಾಹ ನಿಶ್ಚಿತಾರ್ಥ ಆಗಿತ್ತು. ಯುವಕ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನಿಶ್ಚಿತಾರ್ಥ ಉಂಗುರ ಕಳೆದು ಹೋಗಿತ್ತು. ಉಂಗುರು ಕಳೆದುಕೊಂಡಿದ್ದ ವಿಚಾರವನ್ನು ಮನೆಯರ ಎದುರು ಹೇಳಲು ಹೆದರಿ, ಕೆಲ ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವಿಷಿಯ ಕುಟುಂಬಸ್ಥರಿಗೆ ಗೊತ್ತಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಫಲಿಸದ ಚಿಕಿತ್ಸೆ:ಯುವಕ ಕಮಲೇಶ್​ಗೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರು ಯುವಕನ ಜೀವ ಉಳಿಸಬೇಕೆಂದು ಎಷ್ಟೇ ಪ್ರಯತ್ನಿಸಿದರೂ, ಚಿಕಿತ್ಸೆ ಫಲಕಾರಿ ಆಗದ ಪರಿಣಾಮ ಯುವಕ ಮೃತಪಟ್ಟಿದ್ದಾನೆ. ಈ ಕುರಿತು ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ಮದುವೆ 3 ದಿನ ಇರುವಾಗಲೇ ಯುವತಿ ಅನುಮಾನಾಸ್ಪದ ಸಾವು: ಪೊಲೀಸರಿಂದ ತನಿಖೆ

ಮದುವೆಗೆ ಇನ್ನು ಕೇವಲ ಮೂರು ದಿನ ಇರುವಾಗಲೇ ಪ್ರಿಯಕರನ ಮನೆಯಲ್ಲೇ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿ ಬಿ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿ ನಿಶಾನಿ ಕ್ಯಾಂಪ್​ನಲ್ಲಿ ಇತ್ತೀಚೆಗೆ ನಡೆದಿತ್ತು. ನಗರದ ಟಿ.ಬಿ ಡ್ಯಾಂನ ಐಶ್ವರ್ಯ (29) ಮೃತ ಯುವತಿ.

ಐಶ್ವರ್ಯ ಹಾಗೂ ಇದೇ ಪ್ರದೇಶದ ಆಶೋಕ್​ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಅನ್ಯ ಸಮುದಾಯದವಳಾಗಿದ್ದು, ಅಂತರ್ಜಾತಿ ವಿವಾಹದ ಹಿನ್ನೆಲೆ ಅವರ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಇತ್ತೀಚೆಗೆ ಎಲ್ಲರನ್ನೂ ಒಪ್ಪಿಸಿ ಮದುವೆಗೆ ಸಿದ್ಧರಾಗಿದ್ದರು. ಈ ನಡುವೆ ಯುವತಿ ಭಾನುವಾರ ಮೃತಪಟ್ಟಿದ್ದಾಳೆ.

ಯುವಕ ಮೇಲ್ಜಾತಿಯವನಾಗಿದ್ದು, ಇದೇ ವಿಚಾರ ಇಟ್ಟುಕೊಂಡು ಆತನ ಕಡೆಯವರು ಯುವತಿಗೆ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಪೋಷಕರು ದೂರು ನೀಡಿದ್ದರು.

ಎಸ್​ಪಿ ಹೇಳಿದ್ದಿಷ್ಟು:ನ.19ರಂದು ಯುವತಿ ಐಶ್ವರ್ಯ (29) ಅನುಮಾನಾಸ್ಪದ ಸಾವನ್ನಪ್ಪಿರುವ ಬಗ್ಗೆ ಆಕೆಯ ತಂದೆ ದೂರು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸ್​ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಐಶ್ವರ್ಯ ಹಾಗೂ ಅಶೋಕ್​ ಸುಮಾರು 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ, ನ.23ರಂದು ಮದುವೆ ನಿಶ್ಚಯವಾಗಿರುವುದು ಗೊತ್ತಾಗಿದೆ'' ಎಸ್​ಪಿ ಶ್ರೀಹರಿಬಾಬು ಮಾಹಿತಿ ನೀಡಿದ್ದರು.

ಇದನ್ನೂಓದಿ:ಹಾಸನ: ಪೊಲೀಸ್ ಠಾಣೆಯಲ್ಲೇ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

ABOUT THE AUTHOR

...view details