ತುಮಕೂರು :ಐಎಂಎ ಪ್ರಕರಣ ನ್ಯಾಯಾಲಯದಲ್ಲಿದೆ, ಕೇಸ್ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಕೇಸ್ ಇದ್ದರೆ ಅದನ್ನ ಮುಚ್ಚಿ ಹಾಕೋಕೆ ಆಗಲ್ಲ ಎಂದು ಮಧುಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ಸಿ ನಾಗರಾಜ್ ತಿಳಿಸಿದ್ದಾರೆ. ಮಧುಗಿರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಏನು ನಡೆಯಬೇಕು ಖಂಡಿತವಾಗಿ ನಡೆಯಲಿದೆ. ನಾನು ಇದೇ ಮಧುಗಿರಿ ತಾಲೂಕಿನ ಮಣ್ಣಿನ ಮಗ. ನಾನು ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದೆ. ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ರಂಗಕ್ಕೆ ಬಂದಿದ್ದೇನೆ. ಭಾರತೀಯ ಜನತಾ ಪಾರ್ಟಿಯಲ್ಲಿ ಕೆಲಸ ಮಾಡಲು ಬಯಸಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಸಾಕಷ್ಟು ಜನ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ನನಗೆ ಟಿಕೆಟ್ ಕೊಟ್ಟು ಗೌರವಿಸಿದ ಕೇಂದ್ರ ನಾಯಕರು ಹಾಗೂ ರಾಜ್ಯ ನಾಯಕರಿಗೆ ಹಾಗೂ ಜಿಲ್ಲಾ ನಾಯಕರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಎದುರಾಳಿ ಅಂದ್ರೆ ನಮಗೆ ಚುನಾವಣೆ:ಇಲ್ಲಿ ನಮಗೆ ಎದುರಾಳಿ ಎಂಬ ಪ್ರಶ್ನೆ ಬರಲ್ಲ. ಎದುರಾಳಿ ಎಂದರೆ ನಮಗೆ ಚುನಾವಣೆ. ಇಬ್ಬರು ಸಮಾನ ಮನಸ್ಕ ಸ್ನೇಹಿತರು ನಮಗೆ ಎದುರಾಳಿಗಳು ಯಾರೂ ಇಲ್ಲ. ನಾವೆಲ್ಲ ಒಗ್ಗಟ್ಟಾಗಿ ಮೋದಿ ಅವರ ಕೈ ಬಲಪಡಿಸಬೇಕು. ಎಲ್ ಸಿ ನಾಗರಾಜ್, ಕೆ ಎನ್ ರಾಜಣ್ಣ ನನ್ನ ಸೋಲಿಸೋಕೆ ಬರ್ತಿದ್ದಾರೆ ಅಂತ. ನಾನು ಒಬ್ಬ ಸರ್ಕಾರಿ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರ್ತಿನಿ ಎಂದರೆ ನಾನು ಸೋಲೋಕೆ ಎಂದು ಬಂದಿಲ್ಲ. ಗೆಲ್ಲೋ ಅಂತಾನೇ ಬಂದಿರೋದು. ದ್ವೇಷ ರಾಜಕಾರಣ ಅಲ್ಲ ಗೆಲ್ಲೋ ರಾಜಕಾರಣ. ಅವರು ಇಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಜನರ ನಾಡಿಮಿಡಿತ ಅರಿಯುವಲ್ಲಿ ಯಶಸ್ವಿಯಾಗಿಲ್ಲ ಎಂದರು.