ತುಮಕೂರು : ವಾಹನ ತಪಾಸಣೆ ವೇಳೆ ಎಎಸ್ಐಗೆ ಬೈಕ್ ಸವಾರನೊಬ್ಬ ಗುದ್ದಿದ ಪರಿಣಾಮ ಎಎಸ್ಐ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೆಳ್ಳಾವಿ ಬಳಿಯ ಚನ್ನೇನಹಳ್ಳಿ ಗೇಟ್ ಬಳಿ ನಡೆದಿದೆ. ಬೆಳ್ಳಾವಿ ಪೊಲೀಸ್ ಠಾಣೆಯ ಎಎಸ್ ಐ ನಂಜೇಗೌಡ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.
ವೇಗವಾಗಿ ಬಂದ ಬೈಕ್ ಸವಾರ.. ತಪಾಸಣೆ ನಡೆಸುತ್ತಿದ್ದ ವೇಳೆ ಭಯದಲ್ಲಿ ಎಎಸ್ಐ ಗೆ ಬೈಕ್ ಗುದ್ದಿದ!
ಬೆಳ್ಳಾವಿ ಬಳಿಯ ಚನ್ನೆನಹಳ್ಳಿ ಗೇಟ್ ಬಳಿ ಎಎಸ್ ಐ ನಂಜೇಗೌಡ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದರು. ಆಗ ಎಎಸ್ಐಗೆ ಬೈಕ್ ಸವಾರನೊಬ್ಬ ಗುದ್ದಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಾಹನ ತಪಾಸಣೆ ವೇಳೆ ಎಎಸ್ಐ ಗೆ ಬೈಕ್ ಡಿಕ್ಕಿ
ಬೆಳ್ಳಾವಿ ಬಳಿಯ ಚನ್ನೇನಹಳ್ಳಿ ಗೇಟ್ ಬಳಿ ಎಎಸ್ಐ ನಂಜೇಗೌಡ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಗಾಬರಿಗೊಂಡು ಡಿಕ್ಕಿ ಹೊಡೆದಿದ್ದಾನೆ. ಎಎಸ್ಐ ನಂಜೇಗೌಡ ಹಾಗೂ ಬೈಕ್ ಸವಾರ ಇಬ್ಬರು ಕೂಡ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಎಎಸ್ಐ ಅವರಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.