ಕರ್ನಾಟಕ

karnataka

ETV Bharat / state

ಪೆಟ್ರೋಲ್ ಹಾಕದೆ ಮೀಟರ್​ನಲ್ಲಿ ಲೆಕ್ಕ ತೋರಿಸಿದ ಬಂಕ್ ಸಿಬ್ಬಂದಿ.. ಮೋಸದಾಟ ಬಯಲು - ಪೆಟ್ರೋಲ್ ಬಂಕ್​ನಲ್ಲಿ ಗ್ರಾಹಕರಿಗೆ ಮೋಸ

ತುಮಕೂರು ಜಿಲ್ಲೆಯ ಶೆಟ್ಟೀಕೆರೆ ಗ್ರಾಮದ ಪೆಟ್ರೋಲ್ ಬಂಕ್​ನಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

Cheating the customers in petrol pump at shettihalli
ಪೆಟ್ರೋಲ್ ಬಂಕ್​ನಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಿರುವ ಆರೋಪ

By

Published : Sep 20, 2021, 12:02 PM IST

ತುಮಕೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ ಏರುತ್ತಿದೆ. ಹೀಗಿರುವಾಗ ಜಿಲ್ಲೆಯ ಪೆಟ್ರೋಲ್ ಬಂಕ್​ವೊಂದರಲ್ಲಿ ವಾಹನಗಳಿಗೆ ಪೆಟ್ರೋಲ್ ಹಾಕದೇ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟೀಕೆರೆ ಗ್ರಾಮದ ಪೆಟ್ರೋಲ್ ಬಂಕ್​ನಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿ ಬಂದಿದೆ. ವಾಹನಕ್ಕೆ ಪೆಟ್ರೋಲ್ ಹಾಕದಿದ್ದರೂ ಕೂಡ ಏಕಾಏಕಿ ಮೀಟರ್ ರನ್ನಿಂಗ್ ಆಗಿದೆ ಎನ್ನಲಾಗ್ತಿದೆ.

ಪೆಟ್ರೋಲ್ ಬಂಕ್​ನಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಿರುವ ಆರೋಪ

ಪೆಟ್ರೋಲ್ ಗನ್ ಕೈಯಲ್ಲಿ ಇದ್ದರೂ ಪೆಟ್ರೋಲ್ ತುಂಬಿಸಿದಂತೆ ಮೀಟರ್ ರನ್ ಆಗಿದೆ. ಗ್ರಾಹಕರೊಬ್ಬರು ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಈ ಮೋಸದಾಟ ಬೆಳಕಿಗೆ ಬಂದಿದೆ.

ಪೆಟ್ರೋಲ್ ಬಂಕ್ ಸಿಬ್ಬಂದಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ತೂಕ ಮತ್ತು ಅಳತೆಯಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲೀಕನನ್ನು ಕೇಳಿದ್ರೆ, ಈ ಕುರಿತು ಸಿಬ್ಬಂದಿಯನ್ನು ವಿಚಾರಿಸಿ ಮಾಹಿತಿ ನೀಡುವುದಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ.

ABOUT THE AUTHOR

...view details