ತುಮಕೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕರಾವಳಿ ಭಾಗದಲ್ಲಿ 7 ಮಂದಿ ಹತ್ಯೆಗೀಡಾಗಿದ್ದರು. ಆದ್ರೆ ಏಳು ಮಂದಿ ಬಿಜೆಪಿ ಶಾಸಕರು ಈ ಭಾಗದಲ್ಲಿ ಆಯ್ಕೆಯಾದ ನಂತರ ಒಂದೇ ಒಂದು ಕೊಲೆ ಪ್ರಕರಣ ನಡೆದಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ಸಾಂಸ್ಥಿಕ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾರಿಗೆ ಎಷ್ಟು ಪರ್ಸೆಂಟೇಜ್ ಎಂದು ನಿಗದಿ ಮಾಡುವುದರಲ್ಲೇ ಕಾಲಕಳೆದರು. ಅದೊಂದು ರೀತಿ ಪರ್ಸೆಂಟೇಜ್ ಸರ್ಕಾರವಾಗಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಒಂದೆಡೆ ನೆರೆ, ಇನ್ನೊಂದೆಡೆ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮುಖ್ಯಮಂತ್ರಿಯವರು ಇದಕ್ಕೆ ಪೂರಕ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ ಎಂದರು.