ಕರ್ನಾಟಕ

karnataka

ಸಿನಿಮಾದವರ ಬಗ್ಗೆ ಗೌರವ ಇದೆ, ಹಾಗಂತ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲ್ಲ: ಮಧುಬಂಗಾರಪ್ಪ

ಈ ಬಾರಿ ಹೆಚ್ಚಿನ ಕಾಲವಕಾಶ ಸಿಕ್ಕಿದೆ. ಕಳೆದ ಬಾರಿ ಕಡಿಮೆ ಅವಧಿಯಾದ ಕಾರಣ ಎಲ್ಲಾವು ಅರ್ಜೆಂಟ್ ಆಗಿತ್ತು. ಈ ಬಾರಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾವ ಬೂತ್​​ನಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂದಲವಿಲ್ಲ. ನಮಗೆ ಕಾಂಗ್ರೆಸ್ ಹಾಗೂ ಇತರೆ ಪಕ್ಷದವರು ಬೆಂಬಲ ನೀಡುತ್ತಿದ್ದಾರೆ.

By

Published : Mar 26, 2019, 5:03 PM IST

Published : Mar 26, 2019, 5:03 PM IST

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ

ಶಿವಮೊಗ್ಗ:ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನೇ ದಿನೇ ಏರುತ್ತಲೆ ಇದೆ. ಚುನಾವಣೆಯ ಪ್ರಚಾರ ಹಾಗೂ ಮೈತ್ರಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಯಾರ್ಯಾರು ಬರುತ್ತಾರೆ ಎಂಬುದನ್ನು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಜೊತೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.

ಕಳೆದ ಉಪಚುನಾವಣೆಯಲ್ಲಿ ನನಗೆ ಕಡಿಮೆ ಕಾಲವಕಾಶ ಸಿಕ್ಕಿತ್ತು.ಈ ಬಾರಿ ಹೆಚ್ಚಿನ ಕಾಲವಕಾಶ ಸಿಕ್ಕಿದೆ. ಕಳೆದ ಬಾರಿ ಕಡಿಮೆ ಅವಧಿಯಾದ ಕಾರಣ ಎಲ್ಲಾವು ಅರ್ಜೆಂಟ್ ಆಗಿತ್ತು. ಈ ಬಾರಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾವ ಬೂತ್​​ನಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂದಲವಿಲ್ಲ. ನಮಗೆ ಕಾಂಗ್ರೆಸ್ ಹಾಗೂ ಇತರೆ ಪಕ್ಷದವರು ಬೆಂಬಲ ನೀಡುತ್ತಿದ್ದಾರೆ.

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ

ನಾನು ನನ್ನ ಚುನಾವಣಾ ಪ್ರಚಾರಕ್ಕೆ ಯಾವಾಗಲೂ ಸಹ ಚಿತ್ರರಂಗದವರನ್ನು ಕರೆದಿಲ್ಲ. ಅವರ ಬಗ್ಗೆ ನನಗೆ ಗೌರವವಿದೆ. ಉಪಚುನಾವಣೆಯಲ್ಲಿ ನನ್ನ ಪರವಾಗಿ ಹಲವಾರು ಜನ ಬಂದು ಪ್ರಚಾರ ನಡೆಸಿ ಹೋಗಿದ್ದಾರೆ. ಈ ಬಾರಿ ಬೇರೆ ಬೇರೆ ಹಂತದಲ್ಲಿ ಚುನಾವಣೆ ನಡೆಯುವುದರಿಂದ ನಾಯಕರುಗಳು ಲಭ್ಯವಾಗುವುದು ಅನುಮಾನವಾಗಿದೆ. ನನ್ನ ನಾಮಪತ್ರ ಸಲ್ಲಿಕೆಯ ದಿನ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಸಾಥ್ ನೀಡಲಿದ್ದಾರೆ. ನಂತ್ರ ಸಿದ್ದರಾಮಯ್ಯನವರು ಸೇರಿದಂತೆ ಬೇರೆ ಬೇರೆ ನಾಯಕರುಗಳು ಆಗಮಿಸಲಿದ್ದಾರೆ ಎಂದರು.

ಬಂಗಾರಪ್ಪ ಜಿಲ್ಲೆಯ ನಾಯಕರಲ್ಲ, ರಾಜ್ಯದ ನಾಯಕರು:

ಜಿಲ್ಲೆಯ ರಾಜಕಾರಣದಲ್ಲಿ ಬಂಗಾರಪ್ಪನವರ ಹೆಸರು ಹೆಚ್ಚು ಬಳಕೆಯಾಗುತ್ತದೆ. ಅವರು ಕೇವಲ ಜಿಲ್ಲೆಯ ನಾಯಕರಲ್ಲ, ಅವರು ರಾಜ್ಯ ನಾಯಕರು. ಅವರು ಎಲ್ಲಾರಿಗೂ ಬೇಕಾದವರಾಗಿದ್ದರು. ಅವರ ಹೆಸರಿನ ಜೊತೆ ಎರಡು ಪಕ್ಷಗಳ ಹೆಸರನ್ನು ತೆಗೆದು ಕೊಂಡು ಹೋಗ್ತಿವಿ. ಬಂಗಾರಪ್ಪನವರ ಹೆಸರನ್ನು ತೆಗೆದು ಕೊಂಡು ಹೋಗುವುದು ನಮ್ಮ ಪುಣ್ಯ, ಭಾಗ್ಯ. ಅವರ ಸ್ವಾಭಾವ ನನ್ನಲ್ಲಿ ಇರುವುದರಿಂದ ಇದನ್ನು ಬಳಸಿಕೊಳ್ಳಲಾಗುತ್ತದೆ. ನೀರಾವರಿ ಯೋಜನೆಗಳಿಗೆ ಮನವಿ ಮಾಡಿ ಬಿಜೆಪಿಯವರು ಪೋಸ್ಟ್​​​ ಮ್ಯಾನ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಜಿಲ್ಲೆಯ ಯಾವ ನಾಯಕರಲ್ಲೂ ಭಿನ್ನಾಭಿಪ್ರಾಯವಿಲ್ಲ. ‌ಭದ್ರಾವತಿ ಹಾಗೂ ತೀರ್ಥಹಳ್ಳಿಯ ಸಣ್ಣ ಪುಟ್ಟ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.‌ನಾನು ಈಗಾಗಲೇ ನಾಮಪತ್ರ ಸಲ್ಲಿಕೆಗೂ ಮುನ್ನಾ ಎರಡು ಬಾರಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ನಾಮಪತ್ರ ಸಲ್ಲಿಕೆ ನಂತರ ಮತ್ತೆ ಎರಡು ಬಾರಿ ಪ್ರಚಾರಕ್ಕೆ ಹೋಗಬಹುದಾಗಿದೆ ಎಂದರು. ಜಿಲ್ಲೆಯ ಸಮಸ್ಯೆಯನ್ನು‌ ಪರಿಹರಿಸುವಲ್ಲಿ ನಾನು‌ ಸದನದಲ್ಲಿ ಹೋರಾಡುತ್ತೆನೆ. ನಾನು ರಾಜಕಾರಣವನ್ನು ರಾಜ್ಯದಿಂದಲೇ ಮಾಡಬೇಕಿದೆ. ರಾಜ್ಯದ ಅಭಿವೃದ್ದಿಗೆ ಕೇಂದ್ರದಿಂದ ಅನುದಾನ ತರಲು ಅಲ್ಲಿಗೆ ಹೋಗ್ತಾ ಇದ್ದೇನೆ ಅಷ್ಟೆ ಎಂದರು.

For All Latest Updates

TAGGED:

ABOUT THE AUTHOR

...view details